ಟಿವಿ ಚರ್ಚೆಯೊಂದರ ವೇಳೆ ಲಕ್ಷದ್ವೀಪದ ಆಡಳಿತಗಾರ ಪ್ರಫುಲ್ ಕೆ. ಪಟೇಲ್ರನ್ನು ’ಜೈವಿಕ-ಅಸ್ತ್ರ’ ಎಂದು ಕರೆದ ನಟಿ ಆಯಿಶಾ ಸುಲ್ತಾನಾ ವಿರುದ್ಧ ದೇಶದ್ರೋಹದ ಆರೋಪ ಪಟ್ಟಿ ಸಿದ್ಧಪಡಿಸಲಾಗಿದೆ.
ಯಾರೀ ಆಯಿಶಾ….?
ಲಕ್ಷದ್ವೀಪದ ಚೆಟಿಯಾತ್ ದ್ವೀಪದ ಆಯಿಶಾ, ಇತ್ತೀಚೆಗೆ ಬಂದ ಶಾಸನವೊಂದರ ವಿಚಾರದ ಬಗ್ಗೆ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದರು. ಮಾಡೆಲ್, ನಟಿ ಹಾಗೂ ಚಿತ್ರನಿರ್ಮಾಪಕಿಯೂ ಆಗಿರುವ ಆಯಿಶಾ, ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ.
23 ವರ್ಷದ ಯುವಕನಿಗೆ 60 ರ ವೃದ್ದೆ ಮೇಲೆ ಪ್ರೀತಿ…! ಟ್ರೋಲಿಗರ ಪ್ರಶ್ನೆಗೆ ಜೋಡಿಯಿಂದ ಖಡಕ್ ಉತ್ತರ
ಮಲಯಾಳಂ ಟಿವಿ ವಾಹಿನಿಯೊಂದರ ಚರ್ಚೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಯಿಶಾ, “ಲಕ್ಷದ್ವೀಪದಲ್ಲಿ ಕೋವಿಡ್-19ನ 10 ಪ್ರಕರಣಗಳು ಇದ್ದವು. ಈಗ ಇಲ್ಲಿ ಪ್ರತಿನಿತ್ಯ 100 ಪ್ರಕರಣಗಳು ಹೆಚ್ಚಾಗುತ್ತಿವೆ. ಕೇಂದ್ರವು ಇಲ್ಲಿಗೆ ಜೈವಿಕ ಅಸ್ತ್ರವೊಂದನ್ನು ನೇಮಕ ಮಾಡಿದೆ. ಕೇಂದ್ರ ಸರ್ಕಾರ ಇಲ್ಲಿ ಜೈವಿಕ-ಅಸ್ತ್ರವೊಂದನ್ನು ನಿಯೋಜನೆ ಮಾಡಿದ ಎಂದು ನಾನು ಸ್ಪಷ್ಟವಾಗಿ ಹೇಳಬಲ್ಲೆ” ಎಂದಿದ್ದರು.
ವಾಹನ ಮಾಲೀಕರಿಗೆ ಸಿಹಿ ಸುದ್ದಿ -ತೆರಿಗೆ ಪಾವತಿ ಅವಧಿ ವಿಸ್ತರಣೆ
ಲಕ್ಷದ್ವೀಪ ಬಿಜೆಪಿ ಘಟಕದ ಅಧ್ಯಕ್ಷ ಅಬ್ದುಲ್ ಖಾದೆರ್ ಕವರತ್ತಿ ಪೊಲೀಸ್ ಠಾಣೆಯಲ್ಲಿ ಆಯಿಶಾ ಸುಲ್ತಾನಾ ವಿರುದ್ಧ ದೂರು ದಾಖಲಿಸಿದ್ದು, ಆಕೆ ಮಾಡಿರುವುದು ರಾಷ್ಟ್ರ ವಿರೋಧಿ ಕೆಲಸವಾಗಿದ್ದು, ಕೇಂದ್ರ ಸರ್ಕಾರದ ಇಮೇಜ್ ಅನ್ನು ಹಾಳು ಮಾಡಿದೆ ಎಂದು ಆಪಾದನೆ ಮಾಡಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಆಯಿಶಾ ವಿರುದ್ಧ ಐಪಿಸಿಯ 124ಎ (ದೇಶದ್ರೋಹ) ಹಾಗೂ 153ಬಿ (ದ್ವೇಷ ಭಾಷಣ) ಸೆಕ್ಷನ್ಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ.
https://www.facebook.com/AishaOnAir/posts/394024658758820