alex Certify 23 ವರ್ಷದ ಯುವಕನಿಗೆ 60 ರ ವೃದ್ದೆ ಮೇಲೆ ಪ್ರೀತಿ…! ಟ್ರೋಲಿಗರ ಪ್ರಶ್ನೆಗೆ ಜೋಡಿಯಿಂದ ಖಡಕ್‌ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

23 ವರ್ಷದ ಯುವಕನಿಗೆ 60 ರ ವೃದ್ದೆ ಮೇಲೆ ಪ್ರೀತಿ…! ಟ್ರೋಲಿಗರ ಪ್ರಶ್ನೆಗೆ ಜೋಡಿಯಿಂದ ಖಡಕ್‌ ಉತ್ತರ

ನಮ್ಮಿಬ್ಬರ ನಡುವಿನ ವಯಸ್ಸಿನಲ್ಲಿ 37 ವರ್ಷಗಳ ಅಂತರವಿದ್ದರೂ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಪ್ರೇಮಿಗಳಿಬ್ಬರು ಹೇಳಿಕೊಂಡಿದ್ದು ಈ ಮೂಲಕ ಟ್ರೋಲಿಗರ ಬಾಯಿಯನ್ನ ಮುಚ್ಚಿಸಿದ್ದಾರೆ.‌

ಅಮೆರಿಕ ಮೂಲದ 23 ವರ್ಷದ ಕ್ವಾರನ್​ ಹಾಗೂ ಆತನ ಗರ್ಲ್​ಫ್ರೆಂಡ್​ 60 ವರ್ಷದ ಚೆರ್ಲ್​ ಎಂಬವರು ಟಿಕ್​ಟಾಕ್​ನಲ್ಲಿ ಸದಾ ರೋಮ್ಯಾನ್ಸ್​ ಮಾಡುತ್ತಿರುವ ವಿಡಿಯೋಗಳನ್ನೇ ಶೇರ್​ ಮಾಡುತ್ತಿದ್ದರು.

ಒಬ್ಬರಿಗೊಬ್ಬರು ಕಿಸ್​ ಮಾಡುತ್ತಾ, ಮುದ್ದು ಮಾಡುತ್ತಾ ಹಾಗೂ ಡ್ಯಾನ್ಸ್​ ಮಾಡುತ್ತಿರುವ ವಿಡಿಯೋಗಳನ್ನ ಈ ಜೋಡಿ ಟಿಕ್​ಟಾಕ್​ನಲ್ಲಿ ಶೇರ್​ ಮಾಡುತ್ತಿತ್ತು. ಇದನ್ನ ನೋಡಿದ ಪ್ರೇಕ್ಷಕರೊಬ್ಬರು ನೀವು ನಿಮ್ಮ ಕುಟುಂಬದವರ ಒಪ್ಪಿಗೆ ಪಡೆದೇ ಈ ರೀತಿ ಮಾಡ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು.

ಈ ಪ್ರಶ್ನೆಗೆ ವಿಡಿಯೋ ಮೂಲಕ ಉತ್ತರ ನೀಡಿದ ಈ ಜೋಡಿ, ಹೌದು…..ನಮ್ಮ ಕುಟುಂಬಸ್ಥರಿಗೆ ನಮ್ಮ ಪ್ರೀತಿಯ ವಿಚಾರ ತಿಳಿದಿದೆ ಎಂದು ಹೇಳಿದೆ. ಅಂದಹಾಗೆ ಚೆರ್ಲಿಗೆ ಕ್ವಾರನ್​ಗಿಂತಲೂ ಹೆಚ್ಚಿನ ವಯಸ್ಸಿನ ಮಕ್ಕಳಿದ್ದಾರಂತೆ. ಅವರೂ ಸಹ ಈ ಸಂಬಂಧದಿಂದ ಖುಷಿಯಾಗಿದ್ದಾರಂತೆ.

ತಮ್ಮ ಸಂಬಂಧದ ಬಗ್ಗೆ ಸದಾ ನೆಗೆಟಿವ್​ ಕಮೆಂಟ್​ಗಳನ್ನೇ ಈ ಜೋಡಿ ಸ್ವೀಕರಿಸುತ್ತಿದ್ದರು. ಅನೇಕರು ನೀವಿಬ್ಬರು ಅಜ್ಜಿ ಮೊಮ್ಮಗನಂತೆ ಕಾಣುತ್ತೀರಾ ಎಂದೆಲ್ಲ ಹೇಳುತ್ತಿದ್ದರು. ಅಲ್ಲದೇ ಇನ್ನೂ ಹಲವರು ಆಕೆಯ ಶ್ರೀಮಂತಿಕೆ ನೋಡಿ ಈತ ಪ್ರೀತಿಯ ನಾಟಕವಾಡುತ್ತಿದ್ದಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು.

ಈ ಎಲ್ಲಾ ಪ್ರಶ್ನೆಗಳಿಗೆ ಇನ್​ಸ್ಟಾಗ್ರಾಂ ಲೈವ್​ ಮೂಲಕ ಉತ್ತರ ನೀಡಿದ ಈ ಜೋಡಿ, ನೀವು ನಮ್ಮನ್ನ ಈ ರೀತಿ ಜಡ್ಜ್​ ಮಾಡೋದು ಸರಿಯಲ್ಲ. ವಯಸ್ಸಿನ ಅಂತರದಿಂದ ಪ್ರೀತಿಯನ್ನ ಅಳೆಯೋದಕ್ಕೆ ಆಗೋದಿಲ್ಲ. ವಯಸ್ಸು ಅನ್ನೋದು ಕೇವಲ ಸಂಖ್ಯೆ ಮಾತ್ರ. ನಾವು ಯಾವುದೇ ತಪ್ಪು ಕೆಲಸವನ್ನ ಮಾಡುತ್ತಿಲ್ಲ. ಅವನು ನನ್ನನ್ನ ಚೆನ್ನಾಗಿ ನೋಡಿಕೊಳ್ತಿದ್ದಾನೆ. ನಾನು ಕೂಡ ಆತನನ್ನ ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...