alex Certify ನಿಮ್ಮ ದುರ್ಗೆಯನ್ನು ಬೆತ್ತಲೆಯಾಗಿ ಕುಣಿಯುವಂತೆ ಒತ್ತಾಯಿಸಿದವರು ಯಾರು ? ಹಿಂದೂ ದೇವತೆಯ ಕುರಿತ ಈ ಪ್ರಶ್ನೆಗೆ ಸಾರ್ವಜನಿಕರು ಕೆಂಡಾಮಂಡಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ದುರ್ಗೆಯನ್ನು ಬೆತ್ತಲೆಯಾಗಿ ಕುಣಿಯುವಂತೆ ಒತ್ತಾಯಿಸಿದವರು ಯಾರು ? ಹಿಂದೂ ದೇವತೆಯ ಕುರಿತ ಈ ಪ್ರಶ್ನೆಗೆ ಸಾರ್ವಜನಿಕರು ಕೆಂಡಾಮಂಡಲ

ಚಂಡೀಗಡ: ಪಟಿಯಾಲದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಇದೀಗ ಕೊಂಚ ಕಡಿಮೆಯಾಗಿ ಶಾಂತಿ ವಾತಾವರಣ ನಿರ್ಮಾಣವಾಗಿದೆ. ಇದೀಗ ಅಪರಿಚಿತ ವ್ಯಕ್ತಿ ಹಿಂದೂ ಧರ್ಮದ ದುರ್ಗಾ ದೇವಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಿಹಾಂಗ್ ಸಿಖ್ ಓರ್ವ ಪ್ರೊ ಪಂಜಾಬ್ ಟಿವಿಗೆ ನೀಡಿದ ಸಂದರ್ಶನದಲ್ಲಿ, ಹಿಂದೂ ಧರ್ಮದ ಬಗ್ಗೆ ಮಾತನಾಡುವ ಮೊದಲು ಯೋಚನೆ ಮಾಡಬೇಕು. ಖಾಲ್ಸಾ ಪಂಥ ನಿರ್ಮಿಸಿದ ಗುರು ಗೋಬಿಂದ್ ಸಿಂಗ್ ಜಿ ಎಲ್ಲಾ ಧರ್ಮಗಳ ಗುರು. ದುರ್ಗಾದೇವಿಯನ್ನು ಬೆತ್ತಲೆಯಾಗಿ ಕುಣಿಯುವಂತೆ ಒತ್ತಾಯಿಸಿದವರು ಯಾರು ಎಂದು ಪ್ರಶ್ನಿಸುವ ಮೂಲಕ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

ಬ್ರೆಜಿಲ್ ಡೆಫ್ ಒಲಿಂಪಿಕ್ ಗೆ ಧಾರವಾಡದ ನಿಧಿ ಆಯ್ಕೆ

“ಹೇಮಕುಂಠ ಪರ್ಬತ್ ನಲ್ಲಿರುವ ಆ ನೀಚ ಮನುಷ್ಯರು ಯಾರು ? ನಿಮ್ಮ ದುರ್ಗೆಯನ್ನು ಬೆತ್ತಲೆಯಾಗಿ ಕುಣಿಯುವಂತೆ ಒತ್ತಾಯಿಸಿದವರು ಯಾರು ? ಅವಳನ್ನು ಉಳಿಸಿದವರು ಯಾರು ? ಅವರನ್ನು ಕೇಳು. ಇಂದ್ರ ದೇವನ ಮನೆಯನ್ನು ರಾಕ್ಷಸರು ಲೂಟಿ ಮಾಡಿದಾಗ ಮತ್ತು ದುರ್ಗೆಯನ್ನು ಬೆತ್ತಲೆಯಾಗಿ ನೃತ್ಯ ಮಾಡಿದಾಗ, ಅವಳನ್ನು ರಕ್ಷಿಸಿದವರು ಯಾರು ? ಎಂದು ಪ್ರಶ್ನಿಸಿದ್ದಾನೆ.

ಅಲ್ಲದೇ ಕವಿ, ಕಾದಂಬರಿಕಾರ ನಾನಕ್ ಸಿಂಗ್ ಮತ್ತು ಆಡಳಿತ ವ್ಯವಸ್ಥೆಯನ್ನು ಕೇಳಿ. ದೇವಾಲಯದ ಬಳಿಯಿಂದ ಗುಂಡು ಹಾರಿಸಿದವರನ್ನು ಹುಡುಕಿ ಅಥವಾ ಸಿಖ್ಖರಿಗೆ ದಾರಿ ಮಾಡಿ ಕೊಡಿ. ಕಾಳಿ ಮಾತೆ ಎಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ ಎಂಬುದನ್ನು ನಾವು ನೋಡುತ್ತೇವೆ ಎಂದು ಹೇಳಿದ್ದಾನೆ.

ಕಳೆದ ಎರಡು ದಿನಗಳಿಂದ ಶಿವಸೇನೆ ಮತ್ತು ಸಿಖ್ ಗುಂಪುಗಳ ನಡುವೆ ಸಂಘರ್ಷ ಉಂಟಾಗಿ ಅಶಾಂತಿ ನೆಲೆಸಿತ್ತು, ಪರಿಸ್ಥಿತಿಯನ್ನು ಹತೋಟಿಗೆ ತರುವ ಸಲುವಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು, ಕರ್ಪ್ಯೂ ಜಾರಿ ಮಾಡಲಾಗಿತ್ತು. ವದಂತಿಗಳು ಹರಿದಾಡಬಾರದೆಂದು ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...