ಕೆಲವರು ಹಾಲಿನ ಬದಲಾಗಿ ಬಾದಾಮಿ ಹಾಲು ಅಥವಾ ಸೋಯಾ ಹಾಲನ್ನು ಬಳಸುತ್ತಾರೆ. ಆದರೆ ಕೆಲವರಿಗೆ ಕೆಲವೊಂದು ವಸ್ತುಗಳು ಅಲರ್ಜಿಯನ್ನುಂಟು ಮಾಡುತ್ತದೆ. ಹಾಗಾಗಿ ಬಾದಾಮಿ ಹಾಲು ಮತ್ತು ಸೋಯಾ ಹಾಲಿನಲ್ಲಿ ಯಾವುದು ಉತ್ತಮವೆಂದು ತಿಳಿದು ಬಳಸಿ.
ಸೋಯಾ ಹಾಲು ಸಸ್ಯ ಜನ್ಯವಾಗಿದೆ. ಇದನ್ನು ಸೋಯಾ ಬಿನ್ ನಿಂದ ತಯಾರಿಸಲಾಗುತ್ತದೆ. ಇದರಲ್ಲಿ ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟುಗಳಿರುತ್ತದೆ. ಹಾಗೇ ಬಾದಾಮಿ ಹಾಲು ಬಾದಾಮಿಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ವಿಟಮಿನ್ ಇ, ಫೈಬರ್, ಕ್ಯಾಲ್ಸಿಯಂ ಸಮೃದ್ಧವಾಗಿದೆ.
ಆದರೆ ಬಾದಾಮಿ ಹಾಲಿನಲ್ಲಿ ಸೋಯಾ ಹಾಲಿಗಿಂತ ಹೆಚ್ಚು ಪ್ರೋಟೀನ್ ಇರುತ್ತದೆ. ಹಾಗೇ ಬಾದಾಮಿ ಹಾಲಿನಲ್ಲಿ ಸೋಯಾ ಹಾಲಿಗಿಂತ ಕಡಿಮೆ ಕ್ಯಾಲೋರಿ ಇರುತ್ತದೆ. ಹಾಗಾಗಿ ಸೋಯಾ ಹಾಲಿಗಿಂತ ಬಾದಾಮಿ ಹಾಲು ಆರೋಗ್ಯಕ್ಕೆ ಒಳ್ಳೆಯದು.