alex Certify ಈ ರಾಜ್ಯಗಳಲ್ಲಿ ಮರು ಜಾರಿಯಾಗುತ್ತಿದೆ ಹಳೆ ಪಿಂಚಣಿ ಯೋಜನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಜ್ಯಗಳಲ್ಲಿ ಮರು ಜಾರಿಯಾಗುತ್ತಿದೆ ಹಳೆ ಪಿಂಚಣಿ ಯೋಜನೆ

ಹಿಮಾಚಲ ಪ್ರದೇಶವು 1.36 ಲಕ್ಷ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರುಸ್ಥಾಪಿಸಲು ಘೋಷಿಸಿದೆ. ಹೊಸ ಪಿಂಚಣಿ ಯೋಜನೆ (NPS) ಬದಲಿಗೆ ಹಳೆಯ ಪೆನ್ಷನ್ ಸ್ಕೀಮ್ (OPS) ಅನ್ನು ಆಯ್ಕೆ ಮಾಡಿದ ರಾಜ್ಯಗಳ ಸಾಲಿಗೆ ಇದೀಗ ಹಿಮಾಚಲ ಪ್ರದೇಶ ಸೇರಿದೆ.

ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಹಿಮಾಚಲ ಪ್ರದೇಶ ಸರ್ಕಾರದ ಕ್ಯಾಬಿನೆಟ್ ಶುಕ್ರವಾರ ರಾಜ್ಯದಲ್ಲಿ ಒಪಿಎಸ್ ಅನ್ನು ಜಾರಿಗೆ ತರಲು ನಿರ್ಧರಿಸಿದ ನಂತರ ಈ ಬೆಳವಣಿಗೆ ಬಂದಿದೆ. ಆದಾಗ್ಯೂ, ಉದ್ಯೋಗಿಗಳು OPS ಮತ್ತು NPS ನಡುವೆ ಆಯ್ಕೆ ಮಾಡುವ ಸೌಲಭ್ಯವನ್ನು ಹೊಂದಿರುತ್ತಾರೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರುಸ್ಥಾಪಿಸುವುದಾಗಿ ಭರವಸೆ ನೀಡಿತ್ತು.

ರಾಜಸ್ಥಾನ, ಛತ್ತೀಸ್‌ಗಢ ಮತ್ತು ಪಂಜಾಬ್‌ಗಳು ತಮ್ಮ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (OPS) ಜಾರಿಗೆ ತಂದಿರುವ ಇತರ ರಾಜ್ಯಗಳಾಗಿವೆ. ಸದ್ಯ ಕರ್ನಾಟಕದಲ್ಲಿ ಎನ್ ಪಿ ಎಸ್ ವಿರೋಧಿಸಿ ಸರ್ಕಾರಿ ನೌಕರರು ಹಲವು ದಿನಗಳಿಂದ ಹೋರಾಡುತ್ತಲೇ ಇದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...