ಹಿಮಾಚಲ ಪ್ರದೇಶವು 1.36 ಲಕ್ಷ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರುಸ್ಥಾಪಿಸಲು ಘೋಷಿಸಿದೆ. ಹೊಸ ಪಿಂಚಣಿ ಯೋಜನೆ (NPS) ಬದಲಿಗೆ ಹಳೆಯ ಪೆನ್ಷನ್ ಸ್ಕೀಮ್ (OPS) ಅನ್ನು ಆಯ್ಕೆ ಮಾಡಿದ ರಾಜ್ಯಗಳ ಸಾಲಿಗೆ ಇದೀಗ ಹಿಮಾಚಲ ಪ್ರದೇಶ ಸೇರಿದೆ.
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಹಿಮಾಚಲ ಪ್ರದೇಶ ಸರ್ಕಾರದ ಕ್ಯಾಬಿನೆಟ್ ಶುಕ್ರವಾರ ರಾಜ್ಯದಲ್ಲಿ ಒಪಿಎಸ್ ಅನ್ನು ಜಾರಿಗೆ ತರಲು ನಿರ್ಧರಿಸಿದ ನಂತರ ಈ ಬೆಳವಣಿಗೆ ಬಂದಿದೆ. ಆದಾಗ್ಯೂ, ಉದ್ಯೋಗಿಗಳು OPS ಮತ್ತು NPS ನಡುವೆ ಆಯ್ಕೆ ಮಾಡುವ ಸೌಲಭ್ಯವನ್ನು ಹೊಂದಿರುತ್ತಾರೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರುಸ್ಥಾಪಿಸುವುದಾಗಿ ಭರವಸೆ ನೀಡಿತ್ತು.
ರಾಜಸ್ಥಾನ, ಛತ್ತೀಸ್ಗಢ ಮತ್ತು ಪಂಜಾಬ್ಗಳು ತಮ್ಮ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (OPS) ಜಾರಿಗೆ ತಂದಿರುವ ಇತರ ರಾಜ್ಯಗಳಾಗಿವೆ. ಸದ್ಯ ಕರ್ನಾಟಕದಲ್ಲಿ ಎನ್ ಪಿ ಎಸ್ ವಿರೋಧಿಸಿ ಸರ್ಕಾರಿ ನೌಕರರು ಹಲವು ದಿನಗಳಿಂದ ಹೋರಾಡುತ್ತಲೇ ಇದ್ದಾರೆ.