alex Certify ಮತ್ತೊಮ್ಮೆ ಟ್ರೋಲಿಗರ ಬಾಯಿಗೆ ಆಹಾರವಾದ ಪ್ರಸಿದ್ಧ ಸಭ್ಯಸಾಚಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಮ್ಮೆ ಟ್ರೋಲಿಗರ ಬಾಯಿಗೆ ಆಹಾರವಾದ ಪ್ರಸಿದ್ಧ ಸಭ್ಯಸಾಚಿ….!

ಬಟ್ಟೆ ಹಾಗೂ ಆಭರಣ ವಿನ್ಯಾಸಕ ಸಭ್ಯಸಾಚಿ ಬ್ರಾಂಡ್​ ಎಂದರೆ ಸಾಕು ಎಲ್ಲಿಲ್ಲದ ಬೇಡಿಕೆ ಇದೆ. ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಮದುವೆ ಕಾರ್ಯಕ್ರಮಗಳಲ್ಲಿ ಸಭ್ಯಸಾಚಿ ಉಡುಗೆಯಲ್ಲಿಯೇ ಮಿಂಚುತ್ತಾರೆ. ಆದರೆ ಇಂಟರ್ನೆಟ್​ಗೂ ಸಭ್ಯಸಾಚಿಗೂ ಯಾಕೋ ತಾಳಮೇಳವೇ ಕೂಡಿ ಬರುತ್ತಿಲ್ಲ.

ಕೆಲ ದಿನಗಳ ಹಿಂದಷ್ಟೇ ರಾಯಲ್​ ಬೆಂಗಾಲಿ ಮಂಗಳಸೂತ್ರದ ಜಾಹೀರಾತಿನ ವಿಚಾರದಲ್ಲಿ ಭಾರೀ ಟ್ರೋಲ್​ಗೆ ಒಳಗಾಗಿತ್ತು. ಇದೀಗ ಅದ್ಭುತವಾದ ಕಟ್ ವಜ್ರಗಳು, ಓಪಲ್‍ಗಳು, ಮುತ್ತುಗಳು, ಪಚ್ಚೆಗಳು, ಅಕ್ವಾಮರೀನ್ ಹಾಗೂ 22 ಕ್ಯಾರಟ್​ ಚಿನ್ನದ ಬಣ್ಣದ ಕಲ್ಲುಗಳ ಆಭರಣಗಳ ವಿಚಾರದಲ್ಲಿ ಮತ್ತೆ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.

ಸಭ್ಯಸಾಚಿಯ ಆಭರಣಗಳನ್ನು ಧರಿಸಿದ ಮಾಡೆಲ್​ಗಳು ಮುಖದಲ್ಲಿ ಕೊಂಚವು ನಗುಭಾವವನ್ನು ತೋರಿಸಿಲ್ಲ. ಇದನ್ನು ಗಮನಿಸಿದ ನೆಟ್ಟಿಗರು ಮಹಿಳೆಯು ಧರಿಸುವ ಅತ್ಯುತ್ತಮ ಆಭರಣವೇ ನಗು ಎಂದು ಟಾಂಗ್​ ನೀಡಿದ್ದಾರೆ. ಇದೇನು ಅಂತ್ಯಸಂಸ್ಕಾರಕ್ಕೆ ಧರಿಸುವ ಆಭರಣವೇ ಎಂದು ಕೆಲವರು ಕೇಳಿದ್ದರೆ ಇನ್ನೊಬ್ಬ ಟ್ವೀಟಿಗರು ರೂಪದರ್ಶಿಗಳಿಗೆ ಮಲಬದ್ಧತೆ ಆದಂತಿದೆ ಎಂದು ಕಾಲೆಳಿದಿದ್ದಾರೆ.

ಅನೇಕರು ಮಾಡೆಲ್​ಗಳು ಏಕೆ ನಗುತ್ತಿಲ್ಲ..? ಅಂತಹ ಅನಾಹುತ ಏನಾಗಿದೆ ಎಂದು ಸಭ್ಯಸಾಚಿಯ ಕಾಲೆಳೆದಿದ್ದಾರೆ. ಇನ್ನುಳಿದಂತೆ ಕೆಲವು ರೂಪದರ್ಶಿಯ ರೂಪದಲ್ಲಿ ಗಾಢ ಬಣ್ಣದ ಮಹಿಳೆಯರನ್ನು ಆಯ್ಕೆ ಮಾಡಿಕೊಂಡ ಸಭ್ಯಸಾಚಿಯ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ.

— Shan Kamaraj (@skamaraj32) November 28, 2021

https://twitter.com/EmotionalBhakt/status/1464530715178115074

 

 

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...