![](https://kannadadunia.com/wp-content/uploads/2022/07/45698-1.png)
ವಿಡಿಯೊದಲ್ಲಿ ಬಿಳಿ ಕೋಟ್ ಧರಿಸಿದ ವ್ಯಕ್ತಿ ನಿಧಾನವಾಗಿ ಪ್ರಯೋಗಕ್ಕೊಳಗಾದ ವ್ಯಕ್ತಿಯ ಮನಸ್ಸನ್ನು ಮೋಸಗೊಳಿಸುವುದನ್ನು ತೋರಿಸುತ್ತದೆ.
ಪ್ರಯೋಗಕ್ಕೊಳಗಾದ ವ್ಯಕ್ತಿಯ ನಿಜವಾದ ಕೈಯನ್ನು ಕಾಣದಂತೆ ಇರಿಸಲು ಆತ ಮೊದಲು ಬೋರ್ಡ್ ಅನ್ನು ಬಳಸುತ್ತಾನೆ. ಬಟ್ಟೆಯಿಂದ ಮುಚ್ಚುತ್ತಾನೆ. ಕೋಟ್ ಹಾಕಿರುವ ವ್ಯಕ್ತಿ ನಂತರ ನಿಜವಾದ ಮತ್ತು ನಕಲಿ ಎರಡೂ ಕೈಗಳನ್ನು ಸ್ಪರ್ಶಿಸುವ ಮೂಲಕ ಪ್ರಯೋಗ ಪ್ರಾರಂಭಿಸುತ್ತಾನೆ.
ಸ್ವಲ್ಪ ಸಮಯದ ನಂತರ, ಅವನು ಪ್ರಯೋಗಕ್ಕೊಳಗಾದ ವ್ಯಕ್ತಿಯ ನಿಜವಾದ ಕೈ ಮುಟ್ಟುವುದನ್ನೇ ನಿಲ್ಲಿಸುತ್ತಾನೆ. ನಕಲಿ ಕೈಯನ್ನು ಮಾತ್ರ ಮುಟ್ಟುತ್ತಾನೆ. ಮೆದುಳನ್ನು ಹ್ಯಾಕ್ ಮಾಡಿರುವುದು ಆಗ ಸ್ಪಷ್ಟವಾಗಿ ಗೋಚರಿಸುತ್ತದೆ. ನಕಲಿ ಕೈಯನ್ನು ಹೊಡೆಯಲು ಸುತ್ತಿಗೆ ಬಳಸಿದಾಗ, ಪ್ರಯೋಗಕ್ಕೊಳಗಾದ ವ್ಯಕ್ತಿ ಆಶ್ಚರ್ಯಕರ ರೀತಿಯಲ್ಲಿ ತನ್ನ ನೈಜ ಕೈಯಲ್ಲಿ ನೋವು ಅನುಭವಿಸುತ್ತಾರೆ. ವ್ಯಕ್ತಿಯ ಕಣ್ಣುಗಳನ್ನು ಬಳಸಿಕೊಂಡು ಮೆದುಳನ್ನು ಗೊಂದಲಗೊಳಿಸುವುದರ ಮೂಲಕ ಈ ಟ್ರಿಕ್ ಅನ್ನು ನಡೆಸಲಾಗುತ್ತದೆ.
ಈ ತಮಾಷೆ ಮತ್ತು ಆಸಕ್ತಿದಾಯಕ ವಿಡಿಯೊ ನೋಡಿ ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಇದೇನು ಮಾಯೆಯೇ? ಎಂದು ಕೂಡ ಪ್ರಶ್ನಿಸಿದ್ದಾರೆ.