alex Certify ಪ್ರಪಾತದಲ್ಲಿ ಬಿದ್ದ ಸ್ಕೀಯರ್​: ಮೈ ಝುಂ ಎನ್ನುವ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಪಾತದಲ್ಲಿ ಬಿದ್ದ ಸ್ಕೀಯರ್​: ಮೈ ಝುಂ ಎನ್ನುವ ವಿಡಿಯೋ ವೈರಲ್​

ಯಾವುದೇ ರೀತಿಯ ಸಾಹಸ ಕ್ರೀಡೆಯಲ್ಲಿ ತೊಡಗುವಾಗ ಅಪಾಯ ಬೆನ್ನಹಿಂದೆಯೇ ಇರುತ್ತದೆ. ಅಂಥದ್ದೇ ವಿಡಿಯೋ ವೈರಲ್​ ಆಗಿದೆ.
ಫ್ರೆಂಚ್ ಸ್ಕೀಯರ್ ಒಬ್ಬ ಮಾರಣಾಂತಿಕ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಫ್ರೆಂಚ್ ಸ್ಕೀಯಿಂಗ್ ಗುಂಪಿನ ಸದಸ್ಯ ಲೆಸ್ ಪೊವ್ಟೋಸ್ ಸ್ಕೀಯಿಂಗ್​ ಮಾಡುವಾಗ ಈ ಘಟನೆ ಸಂಭವಿಸಿದೆ.

ಮೀಜೆ ಪರ್ವತದ ಮೇಲೆ ಹಿಮಾವೃತ ಹಾದಿಯಲ್ಲಿ ಸಾಗುತ್ತಿದ್ದಾಗ, ಅನುಭವಿ ಸ್ಕೀಯರ್ ಆಕಸ್ಮಿಕವಾಗಿ ಆಳವಾದ ಬಿರುಕಿನ ಮೇಲೆ ಉರುಳಿದ್ದಾರೆ ಮತ್ತು ಒಳಗೆ ಕುಸಿದಿದ್ದಾರೆ. ಸ್ಕೀಯರ್‌ನ ಹೆಲ್ಮೆಟ್‌ಗೆ ಜೋಡಿಸಲಾದ ಕ್ಯಾಮೆರಾದಲ್ಲಿ ಹೃದಯಬಡಿತ ನಿಲ್ಲಿಸುವ ವಿಡಿಯೋ ವೈರಲ್​ ಆಗಿದ್ದು, ನೆಟಿಜನ್‌ಗಳನ್ನು ಬೆಚ್ಚಿಬೀಳಿಸಿದೆ.

ಡೈಲಿಮೇಲ್‌ನ ವರದಿಯ ಪ್ರಕಾರ, ಗುಂಪು ಅವನನ್ನು ರಕ್ಷಿಸಲು ಪ್ರಯಾಸಪಟ್ಟಿತು. ಕ್ರ್ಯಾಂಪಾನ್‌ಗಳು, ಕೊಡಲಿ ಮತ್ತು ಸಲಕೆಗಳನ್ನು ಬಳಸಿ ಹಲವು ಗಂಟೆಗಳ ಬಳಿಕ ಹಿಮಾವೃತ ಆಳದಿಂದ ಹೊರಕ್ಕೆ ಎತ್ತಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...