ಇನ್ನು ಮೂರೇ ಮೂರು ತಿಂಗಳುಗಳಲ್ಲಿ ಮತ್ತೊಂದು ವರ್ಷ ಅಂತ್ಯವಾಗಲಿದೆ. ಆಂಡ್ರಾಯ್ಡ್ ಹಾಗೂ ಐಓಎಸ್ ಫೋನ್‌ಗಳಿಗೆ ತನ್ನ ತಾಂತ್ರಿಕ ಬೆಂಬಲ ನೀಡುವ ಸಂಬಂಧ ಮತ್ತೊಂದು ಪರಿಷ್ಕರಣೆ ಮಾಡಲು ವಾಟ್ಸಾಪ್‌ಗೆ ಮತ್ತೆ ಟೈಂ ಬಂದಿದೆ.
ನವೆಂಬರ್ 1, 2021ರಿಂದ ಯಾವೆಲ್ಲಾ ಡಿವೈಸ್‌ಗಳಿಗೆ ತನ್ನ ತಾಂತ್ರಿಕ ಬೆಂಬಲ ಇರುವುದಿಲ್ಲ ಎಂದು ವಾಟ್ಸಾಪ್ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ.
ದಹಿ ಕಚೋರಿ ಮಾರಾಟ ಮಾಡುತ್ತಿರುವ ಬಾಲಕನ ನೆರವಿಗೆ ನೆಟ್ಟಿಗನ ಮೊರೆ
ಆಂಡ್ರಾಯ್ಡ್‌ನ 4.0.3 ಅಥವಾ ಅದಕ್ಕಿಂತ ಹಳೆಯ ಹಾಗೂ ಐಓಎಸ್ 9 ಅಥವಾ ಅದಕ್ಕಿಂತ ಹಳೆಯ ಓಎಸ್‌ನಲ್ಲಿ ಓಡುತ್ತಿರುವ ಡಿವೈಸ್‌ಗಳಲ್ಲಿ ವಾಟ್ಸಾಪ್ ನ ಆಯ್ದ ಸೇವೆಗಳು ಲಭ್ಯವಿರುವುದಿಲ್ಲ.
ಭದ್ರತೆ ಸಂಬಂಧ ಅಪ್ಡೇಟ್‌ಗಳು, ಹೊಸ ಫೀಚರ್‌ಗಳು ಲಭ್ಯವಾಗದೇ ಇರುವ ಕಾರಣ ಮೇಲ್ಕಂಡ ವರ್ಶನ್‌ನ ಓಸ್‌ಗಳಲ್ಲಿ ಚಾಲೂ ಇರುವ ಡಿವೈಸ್‌ಗಳಲ್ಲಿ ವಾಟ್ಸಾಪ್ ಸೇವೆಗಳು ಕ್ರಮೇಣ ಸ್ಥಗಿತಗೊಳ್ಳಲಿವೆ.
ವಾಟ್ಸಾಪ್ ಅನಿವಾರ್ಯವಾಗುತ್ತಿರುವ ಸಂದರ್ಭದಲ್ಲಿ ಜನರೂ ಸಹ ಉತ್ತಮ ಫೀಚರ್ ಗಾಗಿ ಅಪ್ ಡೇಟೆಡ್ ಮೊಬೈಲ್ ಗೆ ಬದಲಾಗುವುದು ಅನಿವಾರ್ಯವಾಗಲಿದೆ.