ಮೆಟಾ ಮಾಲೀಕತ್ವದ ವಾಟ್ಸಾಪ್ ಬಳಕೆದಾರರಿಗೆ ಒಂದು ಶುಭ ಸುದ್ದಿ ಇದೆ. ಸಂದೇಶಗಳಿಗೆ ಪ್ರತಿಕ್ರಿಯಿಸುವ ಫೀಚರ್, ಗ್ರೂಪ್‌ಗೆ ಇನ್ನೂ 256 ಸ್ನೇಹಿತರನ್ನು ಸೇರಿಸುವ ಅವಕಾಶ, 2ಜಿಬಿ ತನಕದ ಫೈಲ್ ಶೇರ್ ಮಾಡುವುದಕ್ಕೆ ಕಂಪನಿಯು ಬಳಕೆದಾರರಿಗೆ ಅವಕಾಶ ನೀಡಿದೆ.
ವಾಟ್ಸಾಪ್ ನ ಸಂದೇಶ ಪ್ರತಿಕ್ರಿಯೆಗಳ ವೈಶಿಷ್ಟ್ಯವನ್ನು ಕೆಲವು ತಿಂಗಳುಗಳಿಂದ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಕೆಲಸ ಪ್ರಗತಿಯಲ್ಲಿದೆ. ಆರಂಭದಲ್ಲಿ ಕೆಲವೇ ಎಮೋಜಿ ಪ್ರತಿಕ್ರಿಯೆಗಳನ್ನು ಸೇರಿಸಬೇಕಿತ್ತು, ಆದರೆ ಭವಿಷ್ಯದಲ್ಲಿ ಇನ್ನಷ್ಟು ಸೇರಿಸುವುದಕ್ಕೆ ಅವಕಾಶ ಸಿಗಲಿದೆ. ಈ ಹೊಸ ಫೀಚರ್‌ಗಳು ಸಿಗಬೇಕು ಎಂದಾದರೆ, ಬಳಕೆದಾರರು Apple ಆಪ್ ಸ್ಟೋರ್ ಅಥವಾ Google Play Store ಗೆ ಹೋಗಿ ವಾಟ್ಸಾಪ್ ಅನ್ನು ಅಪ್ಡೇಟ್ ಮಾಡಬೇಕು.
ಪುರಾತನ ವೃಕ್ಷದ ಎದುರು ಬೆತ್ತಲೆ ಪೋಸ್ ನೀಡಿದ ಯುವತಿಗೆ ಜೈಲು ಶಿಕ್ಷೆ..!
ಪ್ರಸ್ತುತ, ಇದು ಭಾರತದಲ್ಲಿನ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಲಭ್ಯವಾಗಲಿದೆ. ಇನ್‌ಸ್ಟಾಗ್ರಾಂ, ಡಿಎಂಗಳು, ಸ್ಲ್ಯಾಕ್, ಟ್ವಿಟರ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳು ಒಂದೇ ರೀತಿಯ ಸಂದೇಶ ಪ್ರತಿಕ್ರಿಯೆಗಳ ವೈಶಿಷ್ಟ್ಯಗಳನ್ನು ಹೊಂದಿವೆ.
ಎಮೋಜಿ ಪ್ರತಿಕ್ರಿಯೆಗಳ ಜೊತೆಗೆ, ವಾಟ್ಸಾಪ್‌ನಲ್ಲಿ 2GB ತನಕದ ಫೈಲ್ ಶೇರ್ ಮಾಡಲು ಸಾಧ್ಯವಾಗಲಿದೆ. ಪ್ರಸ್ತುತ ಈ ಮಿತಿ 100MB ಇದ್ದು, ಗಣನೀಯ ಏರಿಕೆಯನ್ನು ಗಮನಿಸಬಹುದು. ಇದೇ ರೀತಿ ವಾಟ್ಸಾಪ್ ಗ್ರೂಪ್‌ನಲ್ಲಿ ಸದ್ಯ 256 ಸದಸ್ಯರಿಗೆ ಅವಕಾಶವಿದ್ದು, ಇನ್ನು ಒಟ್ಟು 512 ಜನರನ್ನು ಸೇರಿಸಲು ಸಾಧ್ಯವಾಗಲಿದೆ ಎಂದು ಕಂಪನಿ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ.