alex Certify ಪುರಾತನ ವೃಕ್ಷದ ಎದುರು ಬೆತ್ತಲೆ ಪೋಸ್​ ನೀಡಿದ ಯುವತಿಗೆ ಜೈಲು ಶಿಕ್ಷೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರಾತನ ವೃಕ್ಷದ ಎದುರು ಬೆತ್ತಲೆ ಪೋಸ್​ ನೀಡಿದ ಯುವತಿಗೆ ಜೈಲು ಶಿಕ್ಷೆ..!

ಬಾಲಿಯ ದೇವಸ್ಥಾನವೊಂದರಲ್ಲಿ 700 ವರ್ಷಗಳಷ್ಟು ಹಳೆಯದಾದ ಪವಿತ್ರ ವೃಕ್ಷದ ಪಕ್ಕದಲ್ಲಿ ಬೆತ್ತಲೆಯಾಗಿ ಪೋಸ್ ಕೊಟ್ಟಿದ್ದಕ್ಕಾಗಿ ರಷ್ಯಾದ ಸೋಶಿಯಲ್​ ಮೀಡಿಯಾ ಇನ್​​ಫ್ಲ್ಯೂಯೆನ್ಸರ್​ ಗೆ ಆರು ವರ್ಷಗಳ ಜೈಲು ಶಿಕ್ಷೆ ಹಾಗೂ ಭಾರಿ ಮೊತ್ತದ ದಂಡವನ್ನುವಿಧಿಸಲಾಗಿದೆ.

ತಬಾನಮ್‌ನ ಬಾಬಕನ್ ದೇವಾಲಯದಲ್ಲಿರುವ ಈ ಮರಕ್ಕೆ ಕೇಯು ಪುತಿಹ್​ ಎಂದು ಕರೆಯಲಾಗುತ್ತದೆ. ಇದು ಶತಮಾನಗಳಷ್ಟು ಹಳೆಯದಾದ ಮರವಾಗಿದೆ. ಹೀಗಾಗಿ ಈ ಮರಕ್ಕೆ ಅಲ್ಲಿನ ಸ್ಥಳೀಯರು ಪವಿತ್ರ ಸ್ಥಾನಮಾನವನ್ನು ನೀಡಿ ದೇವರಂತೆ ಕಾಣುತ್ತಾರೆ. ಇಂತಹ ಮರದಲ್ಲಿ ಅಲೀನ್​ ಫಜ್ಲೀವಾ ಬೆತ್ತಲೆ ಫೋಟೋಶೂಟ್​ ಮಾಡಿಸಿ ಸೋಶಿಯಲ್​ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣರಾಗಿದ್ದಾರೆ .

ಇನ್​ಸ್ಟಾಗ್ರಾಂನಲ್ಲಿ 16 ಸಾವಿರಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಅಲೀನಾ ಫಜ್ಲೀವಾಗೆ ಅಶ್ಲೀಲತೆಯ ಆರೋಪದ ಅಡಿಯಲ್ಲಿ ಸುದೀರ್ಘ ಅವಧಿಗೆ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬರಬಹುದು. ಬಲನೀಸ್​ನ ಉದ್ಯಮಿ ನಿಲುಹ್​​ ಡಿಜೆಲಾಂಟಿಕ್​​ ಈ ಫೋಟೋಗಳನ್ನು ನೋಡಿ ಕಾನೂನು ಸಮರಕ್ಕೆ ಮುಂದಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...