ವಾಟ್ಸಾಪ್, ಇನ್ಸ್ಟಾಗ್ರಾಮ್ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜನರು ಫೋನ್ ನಲ್ಲಿ ಮಾತನಾಡುವುದಕ್ಕಿಂತ ಅದ್ರಲ್ಲಿ ಚಾಟ್ ಮಾಡುವುದು ಹೆಚ್ಚು. ಬಹುತೇಕರು ಕೆಲಸಕ್ಕಾಗಿ ಆನ್ಲೈನ್ ಬಳಕೆ ಮಾಡುವುದ್ರಿಂದ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯವಾಗಿದ್ದಾರೆ.
ದಿನದ 24 ಗಂಟೆಗಳ ಕಾಲ ಆನ್ಲೈನ್ ನಲ್ಲಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಆದ್ರೆ ಅವರ ಈ ಆನ್ಲೈನ್ ಹುಚ್ಚು, ಅವರ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ.
ಯಸ್, ತಜ್ಞರ ಪ್ರಕಾರ, ಆನ್ಲೈನ್ ಇರುವ ಜನರ ಆಲೋಚನೆ ಬದಲಾಗಿದೆ. ಅವರು ಕಳುಹಿಸಿದ ಸಂದೇಶಕ್ಕೆ ತಕ್ಷಣ ಉತ್ತರ ಬಯಸುತ್ತಾರೆ. ಆ ಕಡೆಯಿಂದ ಉತ್ತರ ಸಿಗದೆ ಹೋದಲ್ಲಿ ಅಸಮಾಧಾನಗೊಳ್ಳುತ್ತಾರೆ.
ಬೇರೆಯವರೂ ಸದಾ ಆನ್ಲೈನ್ ನಲ್ಲಿರಬೇಕೆಂದು ಬಯಸುತ್ತಾರೆ. ಇಷ್ಟೇ ಅಲ್ಲ ಆನ್ಲೈನ್ ನಲ್ಲಿ ಇದ್ದೂ ಅವರು ಉತ್ತರ ನೀಡ್ತಿಲ್ಲ ಎಂಬ ಕೊರಗಿನಲ್ಲಿರುತ್ತಾರೆ. ಇದು ವಾಟ್ಸಾಪ್ ಬಳಕೆದಾರರ ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಜನರಿಗೆ ಸಾಮಾಜಿಕ ಜಾಲತಾಣಗಳ ಬಳಕೆ ಬಿಟ್ಟು ಬೇರೆ ಕೆಲಸವಿದೆ ಎಂಬುದನ್ನು ಜನರು ಮರೆಯುತ್ತಿದ್ದಾರೆ. ವಿದೇಶದಲ್ಲಿರುವ ವ್ಯಕ್ತಿಯೂ ಇವರು ಕಳಹಿಸಿದ ತಕ್ಷಣ ಸಂದೇಶ ಕಳುಹಿಸಬೇಕೆಂದು ಬಯಸ್ತಾರೆ. ಆದ್ರೆ ವಿದೇಶದಲ್ಲಿ ಈಗ ಸಮಯವೆಷ್ಟು ಎನ್ನುವುದನ್ನು ಆಲೋಚನೆ ಮಾಡುವುದಿಲ್ಲ. ತಕ್ಷಣ ಉತ್ತರ ಬರದೆ ಹೋದಲ್ಲಿ ಆತ ತನ್ನಿಂದ ದೂರವಾಗ್ತಿದ್ದಾನೆಂದು ಭಾವಿಸುತ್ತಾರೆ.