ಬೆಳಗಾವಿ: ಬೆಳಗಾವಿ ಜಿಲ್ಲೆ ಗೋಕಾಕ್ ಮಹಿಳೆಯೊಬ್ಬರ ವಾಟ್ಸಾಪ್ ಹ್ಯಾಕ್ ಮಾಡಿ ದುಬೈನಲ್ಲಿರುವ ಅವರ ಪತಿಗೆ ಸಂದೇಶ ಕಳಿಸಿ ಹಣಕ್ಕಾಗಿ ಪೀಡಿಸಿದ್ದು, ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೋಕಾಕ್ ನಗರದ ಮಹಿಳೆಯೊಬ್ಬರ ವಾಟ್ಸಾಪ್ ಹ್ಯಾಕ್ ಮಾಡಿದ ವಂಚಕರು ದುಬೈನಲ್ಲಿ ನೆಲೆಸಿದ ಪತಿಗೆ ಸಂದೇಶ ಕಳಿಸಿದ್ದು, ನಿಮ್ಮ ಸಂಬಂಧಿ ಅಫ್ಜಲ್ ಅವರಿಗೆ ಹೃದಯಘಾತವಾಗಿ ಪರಿಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆಗೆ ಹಣ ಬೇಕಿದ್ದು ಕೂಡಲೇ ವರ್ಗಾಯಿಸಿ ಎಂದು ತಿಳಿಸಿದ್ದಾರೆ. ಅಲ್ಲದೆ, ಅಶ್ಲೀಲ ಫೋಟೋಗಳನ್ನು ಕೂಡ ಕಳುಹಿಸಲಾಗಿದ್ದು, ಆತಂಕಗೊಂಡ ಪತಿ, ಪತ್ನಿಯ ಮತ್ತೊಂದು ನಂಬರ್ ಗೆ ಕರೆ ಮಾಡಿ ವಿಚಾರಿಸಿದಾಗ ವಾಟ್ಸಾಪ್ ಹ್ಯಾಕ್ ಮಾಡಿರುವುದು ಗೊತ್ತಾಗಿದೆ. ಈ ಕುರಿತಾಗಿ ಮಹಿಳೆಯ ಸಹೋದರ ಸಿಇಎನ್ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.