alex Certify Good News: ಬಳಕೆದಾರರ ಬಹುಬೇಡಿಕೆಯ ‘ವೀವ್​ ವನ್ಸ್’ ವೈಶಿಷ್ಟ್ಯ ಪರಿಚಯಿಸಿದ ವಾಟ್ಸಾಪ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Good News: ಬಳಕೆದಾರರ ಬಹುಬೇಡಿಕೆಯ ‘ವೀವ್​ ವನ್ಸ್’ ವೈಶಿಷ್ಟ್ಯ ಪರಿಚಯಿಸಿದ ವಾಟ್ಸಾಪ್​..!

ಬಳಕೆದಾರರ ಗೌಪ್ಯತೆ ಯನ್ನು ಕಾಪಾಡುವ ನಿಟ್ಟಿನಲ್ಲಿ ವಾಟ್ಸಾಪ್​ ಹೊಸದೊಂದು ಸೌಲಭ್ಯವನ್ನು ಪರಿಚಯಿಸಿದೆ. ಈ ಹೊಸ ಸೌಲಭ್ಯವು ವಾಟ್ಸಾಪ್​ ಬಳಕೆದಾರರ ಖಾಸಗಿತನಕ್ಕೆ ಸಹಾಯವಾಗುವಂತಿದೆ. ವೀವ್​ ವನ್ಸ್​ ಎಂಬ ಹೊಸ ವೈಶಿಷ್ಟ್ಯವನ್ನು ವಾಟ್ಸಾಪ್​ನಲ್ಲಿ ನೀಡಲಾಗಿದ್ದು ಈ ಮೂಲಕ ನೀವು ಯಾರಿಗೆ ಫೋಟೋವನ್ನು ಕಳಿಸಿದರೆ ಅದನ್ನು ಕೇವಲ 1 ಬಾರಿ ಮಾತ್ರ ನೋಡಲು ಸಾಧ್ಯವಾಗುವಂತಿದೆ.

ಐಓಎಸ್​ ಹಾಗೂ ಆಂಡ್ರಾಯ್ಡ್ ಬಳಕೆದಾರರಿಬ್ಬರಿಗೂ ಈ ಹೊಸ ಸೌಲಭ್ಯವನ್ನು ಪರಿಚಯಿಸಲಾಗಿದೆ. ಬಳಕೆದಾರರ ಗೌಪ್ಯತೆ ಕಾಪಾಡಲು ಹಾಗೂ ಫೋನಿನಲ್ಲಿ ಅನಗತ್ಯ ಫೋಟೋಗಳ ಶೇಖರಣೆಯನ್ನು ತಪ್ಪಿಸುವ ಸಲುವಾಗಿ ಈ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿರೋದಾಗಿ ಕಂಪನಿ ಹೇಳಿದೆ.

ವಾಟ್ಸಾಪ್​ ಮೂಲಕ ಫೋಟೋ ಹಾಗೂ ವಿಡಿಯೋಗಳನ್ನು ಶೇರ್​ ಮಾಡುವುದು ಹೊಸ ವಿಷಯವೇನಲ್ಲ. ಇದರಿಂದ ನಿಮ್ಮ ಮೊಬೈಲ್​​ನ ಸ್ಟೋರೇಜ್​​ ಕೂಡ ತುಂಬುತ್ತದೆ. ಆದರೆ ಈ ಹೊಸ ವೀವ್​ ವನ್ಸ್ ಸೌಲಭ್ಯದ ಅಡಿಯಲ್ಲಿ ನೀವು ಯಾವುದೇ ವ್ಯಕ್ತಿಗೆ ಫೋಟೋ ಇಲ್ಲವೇ ವಿಡಿಯೋಗಳನ್ನು ಶೇರ್​ ಮಾಡಿದಲ್ಲಿ ಅವರು ಕೇವಲ ಒಂದು ಬಾರಿ ಮಾತ್ರ ಅದನ್ನು ವೀಕ್ಷಿಸಬಹುದಾಗಿದೆ. ಅಲ್ಲದೇ ಆ ಫೋಟೋ ಹಾಗೂ ವಿಡಿಯೋಗಳು ನಿಮ್ಮ ಮೊಬೈಲ್​ ಗ್ಯಾಲರಿಯಲ್ಲಿ ಸೇವ್​ ಕೂಡ ಆಗೋದಿಲ್ಲ.

ಈ ವೈಶಿಷ್ಠ್ಯದ ಮೂಲಕ ನಿಮಗೆ ಯಾರೇ ಆಗಲಿ ಫೋಟೋ ಅಥವಾ ವಿಡಿಯೋಗಳನ್ನು ಶೇರ್ ಮಾಡಿದಲ್ಲಿ ನಿಮಗೆ ‘ ವೀವ್​ ವನ್ಸ್’ ಎಂಬ ಐಕಾನ್​ ರೀತಿಯಲ್ಲಿ ಗೋಚರವಾಗಲಿದೆ. ಇದನ್ನು ನೀವು ಒಪನ್​ ಮಾಡುತ್ತಿದ್ದಂತೆಯೇ ಅದು ಮತ್ತೊಮ್ಮೆ ನೋಡಲು ಸಾಧ್ಯವಿಲ್ಲ. ನೋವು ಆ ವಿಡಿಯೋ ಅಥವಾ ಫೋಟೋವನ್ನು ವೀಕ್ಷಿಸಿದ ಬಳಿಕ ವೀವ್ಸ್ ವನ್ಸ್ ಎಂದು ಗೋಚರವಾಗ್ತಿದ್ದ ಆಯ್ಕೆಯು ‘ಓಪನ್ಡ್’ ಎಂದು ತೋರಲಿದೆ. ಇದರಿಂದ ಬಳಕೆದಾರರಿಗೆ ಯಾವುದೇ ಗೊಂದಲ ಉಂಟಾಗೋದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...