ಹಲವಾರು ನೂತನ ಅಪ್ಡೇಟ್ಸ್ಗಳೊಂದಿಗೆ ಬಂದಿರುವ ವಾಟ್ಸಾಪ್ ಇದಾಗಲೇ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದೆ. ಇದೀಗ ತನ್ನ ನೂತನ ಅಪ್‌ಡೇಟ್‌ನಲ್ಲಿ ಗ್ರೂಪ್ ಸದಸ್ಯರ ಸಂಖ್ಯೆ ಹೆಚ್ಚಿಸಿದ್ದು, ಇದು ಐಒಎಸ್ ಹಾಗೂ ಅಂಡ್ರಾಯ್ಡ್ ಫೋನ್ಗಳಿಗೂ ಅನ್ವಯ ಆಗಲಿದೆ.
ಆರಂಭದಲ್ಲಿ ವಾಟ್ಸಾಪ್ ಗ್ರೂಪ್‌ಗೆ 256 ಸದಸ್ಯರನ್ನು ಸೇರಿಸಲು ಅವಕಾಶ ಇತ್ತು. ಬಳಿಕ ಆ ಸಂಖ್ಯೆಯನ್ನು 512 ಕ್ಕೆ ಹೆಚ್ಚಿಸಿತ್ತು. ಈಗ ಗ್ರೂಪ್ ರಚನೆಯ ಸದಸ್ಯರ ಮಿತಿಯನ್ನು 1024 ಗೆ ಹೆಚ್ಚಿಸಲು ಕೆಲಸ ಮಾಡಿದೆ. ಕಳೆದ ತಿಂಗಳು ಜಾರಿಗೊಳಿಸಿದ್ದ ಈ ಹೊಸ ಅಪ್ಡೇಟ್ ಆಯ್ದ ಬೀಟಾ ಬಳಕೆದಾರರಿಗೆ ಸೀಮಿತವಾಗಿತ್ತು, ಇದನ್ನೀಗ ಎಲ್ಲಾ ಸ್ಮಾರ್ಟ್ಫೋನ್ಗಳಲ್ಲಿಯೂ ಬಳಸಬಹುದಾಗಿದೆ ಎಂದು ಕಂಪೆನಿ ಹೇಳಿದೆ.
ಇದನ್ನು ಅಪ್ಡೇಟ್ ಮಾಡುವುದು ಹೇಗೆ ? ಇಲ್ಲಿದೆ ವಿವರ
ವಾಟ್ಸ್ಆ್ಯಪ್ ಓಪನ್ ಮಾಡಿದಾಗ ಮೇಲಿನ ಎಡಭಾಗದಲ್ಲಿ ಮನುಷ್ಯರ ಆಕೃತಿ ಗ್ರೂಪ್ ಚಿಹ್ನೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ
ಆಗ start your community ಸಂದೇಶ ಕಾಣಿಸುತ್ತದೆ.
ಕೆಳಭಾಗದಲ್ಲಿರುವ ‘ಗೆಟ್ ಸ್ಟಾರ್ಟ್’ ಆಯ್ಕೆಯನ್ನು ಟ್ಯಾಪ್ ಮಾಡಿ
ಸಮುದಾಯದ ಹೆಸರನ್ನು ಬರೆಯಿರಿ ಮತ್ತು ವಿವರಣೆಯನ್ನು ಭರ್ತಿ ಮಾಡಿ
ಕೆಳಗಿನ ಬಲಭಾಗದಲ್ಲಿ ಮುಂದೆ/ಮುಂದಿನ ಬಾಣದ ಮೇಲೆ ಟ್ಯಾಪ್ ಮಾಡಿ
ಈಗ ನೀವು ಎರಡು ಆಯ್ಕೆಗಳನ್ನು ನೋಡುತ್ತೀರಿ – ಹೊಸ ಗುಂಪನ್ನು ರಚಿಸಿ ಮತ್ತು ಅಸ್ತಿತ್ವದಲ್ಲಿರುವ ಗುಂಪನ್ನು ಸೇರಿಸಿ
ಇದಕ್ಕೆ ಸೇರಿಸಲು ನೀವು ಈಗಾಗಲೇ ಬಹು ಗುಂಪುಗಳನ್ನು ಹೊಂದಿದ್ದರೆ, ಅಸ್ತಿತ್ವದಲ್ಲಿರುವ ಗುಂಪನ್ನು ಸೇರಿಸು ಕ್ಲಿಕ್ ಮಾಡಿ
ನೀವು ಗುಂಪುಗಳ ಪಟ್ಟಿಯನ್ನು ನೋಡುತ್ತೀರಿ – ಅವುಗಳಲ್ಲಿ ಆಯ್ಕೆಮಾಡಿ
ಕೆಳಗಿನ ಬಲಭಾಗದಲ್ಲಿ ಮುಂದೆ/ಮುಂದಿನ ಬಾಣದ ಮೇಲೆ ಟ್ಯಾಪ್ ಮಾಡಿ
ಅಷ್ಟೇ, ನಿಮ್ಮ ಸಮುದಾಯವು ಈಗ ‘ಸಮುದಾಯ’ ಆಯ್ಕೆಯ ಅಡಿಯಲ್ಲಿ ಗೋಚರಿಸುತ್ತದೆ
ಈ ಹೊಸ ಫೀಚರ್ ಮೂಲಕ ನೀವು ಈಗ ಒಂದೇ ಗುಂಪಿನಲ್ಲಿ 1024 ಮಂದಿಯನ್ನು ಸೇರಿಸಿ ಒಟ್ಟಿಗೇ ಸಂವಹನ ನಡೆಸಬಹುದಾಗಿದೆ.