alex Certify ವಾಟ್ಸಾಪ್‌ ನಿಂದ 30 ಲಕ್ಷ ಅಕೌಂಟ್ ಬ್ಯಾನ್…! ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್‌ ನಿಂದ 30 ಲಕ್ಷ ಅಕೌಂಟ್ ಬ್ಯಾನ್…! ಇದರ ಹಿಂದಿದೆ ಈ ಕಾರಣ

ಫೇಸ್ಬುಕ್ ಮಾಲೀಕತ್ವದ ಮೆಸೇಜಿಂಗ್ ಸೇವಾದಾರ ವಾಟ್ಸಾಪ್‌ ಭಾರತದಲ್ಲಿರುವ ತನ್ನ ಬಳಕೆದಾರರ ಪೈಕಿ 30 ಲಕ್ಕಕ್ಕೂ ಹೆಚ್ಚು ಮಂದಿಯ ಖಾತೆಗಳನ್ನು ರದ್ದು ಮಾಡಿರುವುದಾಗಿ ತಿಳಿಸಿದೆ.

ಜೂನ್ 16 ರಿಂದ ಜುಲೈ 31ರ ನಡುವಿನ 45 ದಿನಗಳ ಅವಧಿಯಲ್ಲಿ ಇಷ್ಟು ಮಂದಿಯ ಖಾತೆಗಳು ಬ್ಯಾನ್ ಆಗಿವೆ. ಇದೇ ವೇಳೆ ಖಾತೆ ಸಪೋರ್ಟ್‌ಗೆ 137 ಮನವಿಗಳು ಬಂದಿದ್ದು, ಖಾತೆಗಳನ್ನು ಬ್ಯಾನ್ ಮಾಡಲು 316 ಮನವಿಗಳನ್ನು ವಾಟ್ಸಾಪ್ ಸ್ವಿಕರಿಸಿದೆ.

“ಭಾರತದ ಕಾನೂನುಗಳು ಹಾಗೂ ವಾಟ್ಸಾಪ್‌‌ ನ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ನಾವು ಸ್ವೀಕರಿಸಿದ ಬಳಕೆದಾರರ ವರದಿಗಳು ಹಾಗೂ ದೂರುಗಳನ್ನು ಆಧರಿಸಿ, ನಮ್ಮ ಪತ್ತೆ ಮತ್ತು ಕಡಿವಾಣದ ಕ್ರಮಗಳ ಮೂಲಕ ಇಷ್ಟು ಖಾತೆಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ” ಎಂದು ಕಂಪನಿ ತನ್ನ ಅಧಿಕೃತ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ರಮೇಶ್ ಕುಮಾರ್ ವಿರುದ್ಧ ಸಚಿವ ಕೆ.ಸುಧಾಕರ್ ವಾಗ್ದಾಳಿ

ಒಟ್ಟಾರೆಯಾಗಿ ಬ್ಯಾನ್ ಆದ 95 ಪ್ರತಿಶತ ಖಾತೆಗಳಿಂದ ಸ್ಪಾಮ್ ಸಂದೇಶಗಳು ರವಾನೆಯಾಗುತ್ತಿದ್ದವೆಂದು ಕಂಪನಿ ತಿಳಿಸಿದೆ. ಮೇ 15-ಜೂನ್ 15ರ ನಡುವಿನ ಅವಧಿಯಲ್ಲಿ ಇಂಥದ್ದೇ ಕಾರಣಗಳಿಂದ 20 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ರದ್ದು ಮಾಡಿದ್ದಾಗಿ ವಾಟ್ಸಾಪ್ ತನ್ನ ವರದಿಯಲ್ಲಿ ತಿಳಿಸಿತ್ತು.

ಸರ್ಚ್ ಎಂಜಿನ್ ದೈತ್ಯ ಗೂಗಲ್ ಸಹ ಮೇ ಮತ್ತು ಜೂನ್ ಅವಧಿಯಲ್ಲಿ 1.5 ಲಕ್ಷದಷ್ಟು ಕಂಟೆಂಟ್‌ಗಳನ್ನು ತನ್ನ ತಾಣಗಳಿಂದ ಕ್ಲೀನ್ ಮಾಡಿತ್ತು. ಇವುಗಳ ಪೈಕಿ 98 ಪ್ರತಿಶತದಷ್ಟು ಕಾಪಿರೈಟ್‌ ಸಂಬಂಧಿ ದೂರುಗಳೇ ಆಗಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...