alex Certify ಏನಿದು ಇ-ರುಪಿ…? ಇಲ್ಲಿದೆ ಈ ಕುರಿತ ಒಂದಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏನಿದು ಇ-ರುಪಿ…? ಇಲ್ಲಿದೆ ಈ ಕುರಿತ ಒಂದಷ್ಟು ಮಾಹಿತಿ

ಡಿಜಿಟಲ್ ಪಾವತಿಗೆ ಇನ್ನಷ್ಟು ಉತ್ತೇಜನ ಕೊಡುವ ಉದ್ದೇಶದಿಂದ ಇ-ರುಪಿ ಸೌಲಭ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಸಂಜೆ 4:30ಕ್ಕೆ ಚಾಲನೆ ಕೊಟ್ಟಿದ್ದಾರೆ.

ಏನಿದು ಇ-ರುಪಿ ?

ನಗದುರಹಿತ ಹಾಗೂ ಸಂಪರ್ಕರಹಿತವಾಗಿ ಡಿಜಿಟಲ್ ಪಾವತಿ ಮಾಡಲು ಇರುವ ವ್ಯವಸ್ಥೆ ಆಗಿರುವ ಇ-ರುಪಿ ಕ್ಯೂಆರ್‌ ಕೋಡ್ ಹಾಗೂ ಎಸ್‌ಎಂಎಸ್‌ ಆಧರಿತ ಇ-ವೌಚರ್‌‌ ಆಗಿದ್ದು, ಫಲಾನುಭವಿಗಳ ಮೊಬೈಲ್‌ಗಳಿಗೆ ಕಳುಹಿಸಲಾಗುವುದು.

ಬಿದ್ದರೂ ಎದ್ದು ಓಡಿದ ಬಾಲಕಿ: ಸ್ಪೂರ್ತಿದಾಯಕ ವಿಡಿಯೋ ವೈರಲ್

ಒಮ್ಮೆ-ಪಾವತಿ ಮಾಡುವ ಈ ಸೌಲಭ್ಯದ ಮುಖಾಂತರ ಕಾರ್ಡ್ ಇಲ್ಲದೆಯೂ ಈ ವೌಚರ್‌ ಅನ್ನು ಯಾವುದೇ ಕಾರ್ಡ್, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಅಥವಾ ಬ್ಯಾಂಕಿಂಗ್ ಇಲ್ಲದೆಯೇ ಬಳಸಬಹುದಾಗಿದೆ.

ತನ್ನ ಯುಪಿಐ ಪ್ಲಾಟ್‌ಫಾರಂನಲ್ಲಿ ರಾಷ್ಟ್ರೀಯ ಪಾವತಿ ಪಾವತಿ ಕಾರ್ಪೋರೇಷನ್ (ಎನ್‌ಪಿಸಿಐ) ಅಭಿವೃದ್ಧಿಪಡಿಸಿರುವ ಇ-ರುಪಿ ಹೊರತರಲು ವಿತ್ತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ರಾಷ್ಟೀಯ ಆರೋಗ್ಯ ಪ್ರಾಧಿಕಾರಗಳು ಸಹಹೋಗದಿಂದ ಕೆಲಸ ಮಾಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...