alex Certify ಕೊರೊನಾ ಸೋಂಕಿಗೊಳಗಾದಾಗ ದೇಹದಲ್ಲಾಗುವ ಬದಲಾವಣೆಗಳೇನು…? ಇಲ್ಲಿದೆ ತಜ್ಞರು ನೀಡಿರುವ ಸಂಕ್ಷಿಪ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿಗೊಳಗಾದಾಗ ದೇಹದಲ್ಲಾಗುವ ಬದಲಾವಣೆಗಳೇನು…? ಇಲ್ಲಿದೆ ತಜ್ಞರು ನೀಡಿರುವ ಸಂಕ್ಷಿಪ್ತ ಮಾಹಿತಿ

ಕಳೆದ ಎರಡೂವರೆ ವರ್ಷಗಳಿಂದ ಜಗತ್ತು ಕೊರೋನಾ ವೈರಸ್‌ನ ಸಾಂಕ್ರಾಮಿಕದಿಂದ ರೋಸಿ ಹೋಗಿದೆ. ಚೀನಾದ ವುಹಾನ್ ನಗರದಲ್ಲಿ ಕೋವಿಡ್‌-19ನ ಮೊದಲ ಪ್ರಕರಣ ಪತ್ತೆಯಾಗಿಂದಲೂ ಈ ವೈರಸ್‌ನ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳಲು ಹಲವಾರು ರೀತಿಯ ಸಂಶೋಧನೆಗಳನ್ನು ಮಾಡಲಾಗಿದೆ.

ಕೋವಿಡ್ ಸೋಂಕು ತೀವ್ರವಾದ ಉಸಿರಾಟದ ಕಾಯಿಲೆಯಾಗಿದ್ದು ಅದು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ ಎಂದು ಅನೇಕ ತಜ್ಞರು ಹೇಳಿದ್ದಾರೆ. ಆದರೆ, ಈ ವೈರಸ್ ಮಾನವ ದೇಹಕ್ಕೆ ಪ್ರವೇಶಿಸಿದಾಗ ನಿಖರವಾಗಿ ಏನಾಗುತ್ತದೆ ? ಇತ್ತೀಚಿನ ಅಧ್ಯಯನದಲ್ಲಿ, ಸೋಂಕುಪೀಡಿತ ರೋಗಿಯ ದೇಹದಲ್ಲಿ ಏನಾಗುತ್ತದೆ ಎಂಬುದನ್ನು ಸಂಶೋಧಕರು ಕಂಡುಕೊಳ್ಳುವ ಕೆಲಸ ಮಾಡಿದ್ದಾರೆ.

ದೇಹದೊಳಗೆ ರೂಪಾಂತರಗೊಳ್ಳುತ್ತದೆ ವೈರಸ್

ಟೆಕ್ನಿಯನ್ – ಇಸ್ರೇಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಅಸ್ತಿತ್ವದಲ್ಲಿರುವ ಮಾಹಿತಿಗಳ ವಿಶ್ಲೇಷಣೆ ಮಾಡಿ, ಸೋಂಕಿನ ವಿವಿಧ ರೂಪಾಂತರಗಳನ್ನು ಮತ್ತು ಹೊಸದಾದ, ಹಿಂದೆ ತಿಳಿದಿಲ್ಲದ ರೂಪಾಂತರವೊಂದನ್ನು ಸಹ ಇದೇ ವೇಳೆ ಕಂಡುಹಿಡಿದಿದ್ದಾರೆ. ಸಂಶೋಧಕರು ಈ ರೂಪಾಂತರಗಳ ವಿರುದ್ಧ ಚಾಲ್ತಿಯಲ್ಲಿರುವ ಲಸಿಕೆಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂದು ಪರಿಶೀಲಿಸಿದ್ದಾರೆ. ಮತ್ತು ಸ್ಪೈಕ್ ಪ್ರೋಟೀನ್‌ನಲ್ಲಿನ ವಿವಿಧ ರೀತಿಯ ರೂಪಾಂತರಗಳನ್ನು ಅವಲಂಬಿಸಿ ಲಸಿಕೆಯ ಪ್ರಭಾವ ಯಾವ ರೀತಿ ವ್ಯತ್ಯಾಸಗೊಳ್ಳುತ್ತಿದೆ ಎಂದೂ ಸಹ ಅಧ್ಯಯನ ಮಾಡಲಾಗಿದೆ.

ತಾವು s2A ನಲ್ಲಿ ನಿರ್ದಿಷ್ಟ ರೂಪಾಂತರವನ್ನು ಗುರುತಿಸಿರುವುದಾಗಿ – ಸ್ಪೈಕ್ ಪ್ರೋಟೀನ್‌ಗಳಲ್ಲಿ ಒಂದಾಗಿದೆ, ಇದು ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಗಳ ಪರಿಣಾಮಕಾರಿತ್ವವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳುತ್ತಾರೆ ಸಂಶೋಧಕರು.

ಈ ವಿಚಾರವಾಗಿ ಮಾಧ್ಯಮ ಜೊತೆಗೆ ಮಾತನಾಡಿದ ರಾಪ್ಪಪೋರ್ಟ್ ಫ್ಯಾಕಲ್ಟಿ ಆಫ್ ಮೆಡಿಸಿನ್‌ನ ಸಹಾಯಕ ಪ್ರಾಧ್ಯಾಪಕ ಯೋಟಮ್ ಬಾರ್-ಆನ್, “ವೈರಸ್ ಆತಿಥೇಯ ದೇಹಕ್ಕೆ ತನ್ನನ್ನು ತಾನು ಅಳವಡಿಸಿಕೊಳ್ಳುವುದನ್ನು ಅರ್ಥಮಾಡಿಕೊಳ್ಳುವಲ್ಲಿ ಈ ಅಧ್ಯಯನ ಪ್ರಮುಖ ಅಂಶವಾಗಿದೆ,” ಎಂದು ಹೇಳಿದ್ದು. “ನಮ್ಮ ಸಂಶೋಧನೆಗಳು ವೈರಸ್‌ನ ದೌರ್ಬಲ್ಯಗಳನ್ನು ಪತ್ತೆಹಚ್ಚಲು ನೆರವಾಗಬಹುದು — ಅಂದರೆ ಸೋಂಕು ಪಸರುವ ಸಾಮರ್ಥ್ಯವನ್ನು ದುರ್ಬಲಗೊಳಿಸುವ ಕಾರ್ಯವಿಧಾನಗಳು – ಮತ್ತು ಸೋಂಕನ್ನು ನಿಗ್ರಹಿಸಲು ಹೊಸ ಕ್ರಮಗಳನ್ನು ಅಭಿವೃದ್ಧಿಪಡಿಸಲು,” ಎನ್ನುತ್ತಾರೆ.

ಅಧ್ಯಯನ ಏನು ಹೇಳುತ್ತದೆ?

PLOS ಪ್ಯಾಥೋಜೆನ್ಸ್ ನಿಯಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಸಂಶೋಧನಾ ತಂಡವು ವೈಯಕ್ತಿಕ ಮಟ್ಟದಲ್ಲಿ ಸೀಕ್ವೆನ್ಸಿಂಗ್‌ ಅನ್ನು ಒದಗಿಸಿದ್ದು, ವೈರಸ್‌ನ ವೈಯಕ್ತಿಕ ಜೀನೋಮ್ ಮ್ಯಾಪಿಂಗ್ ಮಾಡುವುದರ ಜೊತೆಗೆ ರೋಗಿಯ ಉಸಿರಾಟದ ವ್ಯವಸ್ಥೆಯಲ್ಲಿ ಅಭಿವೃದ್ಧಿಪಡಿಸಿದ ವಿಭಿನ್ನ ರೂಪಾಂತರಗಳನ್ನು ಹೋಲಿಸಲಾಗಿದೆ.

ಸರಳವಾದ ವಿಧಾನಗಳೊಂದಿಗೆ ಕಾಣಿಸದ ಅಂಗಾಂಶ ಕೋಶಗಳಲ್ಲಿ ಕಂಡುಬರುವ ಕೆಲವು ಕಡಿಮೆ ಪ್ರಭಾವದ ವೈರಸ್‌ಗಳನ್ನು ಸಹ ಸಂಶೋಧಕರು ಪತ್ತೆಹಚ್ಚಿದ್ದಾರೆ. ರೋಗಿಯ ದೇಹದ ಅಂಗಗಳಲ್ಲಿ ಬೆಳವಣಿಗೆಯಾಗುವ ರೂಪಾಂತರಗಳು, ನಿಯಮದಂತೆ, ತುಲನಾತ್ಮಕವಾಗಿ ಅಂಟಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಹೊಂದಿವೆ. ಸರಳ ರೀತಿಯಲ್ಲಿ ಹೇಳುವುದಾದರೆ, ಈ ರೂಪಾಂತರಗಳು ವ್ಯಕ್ತಿಯಿಂದ ವ್ಯಕ್ತಿಗೆ ಹರಡಲು ಸಾಧ್ಯವಾಗುವುದಿಲ್ಲ.

ಈ ಮಾತಿಗೆ ಇನ್ನಷ್ಟು ಪುಷ್ಟಿ ನೀಡುವ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಮೇಲ್ಕಂಡ ಅಧ್ಯಯನದಲ್ಲಿ ಇಲ್ಲಿಯವರೆಗೆ ಪರೀಕ್ಷಿಸಿದ 10 ರೂಪಾಂತರಗಳಿಗೆ ಸಂಶೋಧನೆಯ ಫಲಿತಾಂಶಗಳು ನಿಜವಾಗಿ ಕಂಡಿವೆ. ವೈಯಕ್ತಿಕ ಮಟ್ಟದಲ್ಲಿ ವೈರಸ್‌ನ ವಿಕಸನದ ವಿಶ್ಲೇಷಣೆ, ಅದರ ಅಭಿವೃದ್ಧಿ ಮತ್ತು ಲಸಿಕೆಗಳು ಮತ್ತು ಔಷಧಿಗಳನ್ನು ಬಳಸಿಕೊಂಡು ವೈರಾಣುಗಳನ್ನು ಎದುರಿಸಲು ಸಂಭವನೀಯ ವಿಧಾನಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ನೀಡುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...