ಸಂಪೂರ್ಣ ಆಹಾರ ಎನಿಸಿಕೊಂಡಿರುವ ಹಾಲಿನಲ್ಲಿರುವ ಪ್ರಯೋಜನಗಳು ಹಲವು. ಸಾಮಾನ್ಯವಾಗಿ ಮಕ್ಕಳಿಗಂತೂ ಪ್ರತಿನಿತ್ಯ ಹಾಲು ಕುಡಿಸಲಾಗುತ್ತದೆ. ಮಕ್ಕಳಿಗೆ ಬಾಲ್ಯದಿಂದಲೂ ಪ್ರತಿದಿನ ಒಂದು ಲೋಟ ಹಾಲು ಕುಡಿಯುವ ಅಭ್ಯಾಸ ಮಾಡಲಾಗುತ್ತದೆ. ಇದು ಅವರ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ? ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದರಿಂದ ಏನಾಗುತ್ತದೆ ಎಂಬುದನ್ನು ತಿಳಿಯೋಣ.
ಸ್ನಾಯು ಶಕ್ತಿ ಕೇಂದ್ರ
ಹಾಲಿನಲ್ಲಿರುವ ಪ್ರೋಟೀನ್ ಸ್ನಾಯುಗಳಿಗೆ ಶಕ್ತಿ ಕೇಂದ್ರವಾಗಿದೆ. ಜೀವಕೋಶಗಳನ್ನು ಸರಿಪಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ದೇಹಕ್ಕೆ ಶಕ್ತಿ ತುಂಬುತ್ತದೆ.
ಮೂಳೆ ಮತ್ತು ಹಲ್ಲುಗಳಿಗೆ ಬಲ
ಹಾಲು, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿನ ನೈಸರ್ಗಿಕ ಮೂಲವಾಗಿದೆ. ಮೂಳೆಗಳು ಮತ್ತು ಹಲ್ಲುಗಳನ್ನು ಇದು ಬಲಪಡಿಸುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆ ಸುಧಾರಣೆ
ಹಾಲಿನಲ್ಲಿ ವಿಟಮಿನ್ ಬಿ12 ಸೇರಿದಂತೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿರುತ್ತವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ನೀರಿನ ಕೊರತೆ ನಿವಾರಣೆ
ಹಾಲು ನಮ್ಮ ದೇಹದ ನೀರಿನ ಅಗತ್ಯವನ್ನು ಪೂರೈಸುತ್ತದೆ. ಈ ಕಾರಣದಿಂದಾಗಿ ಡಿಹೈಡ್ರೇಶನ್ ಆಗುವುದಿಲ್ಲ.
ರೋಗ ನಿವಾರಕ
ಪ್ರತಿದಿನ ಹಾಲು ಕುಡಿಯುವುದರಿಂದ ಆಸ್ಟಿಯೊಪೊರೋಸಿಸ್‌ನಂತಹ ಮೂಳೆ ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು. ಹೃದಯರಕ್ತನಾಳದ ಕಾಯಿಲೆಗಳು ಸಹ ನಮ್ಮ ಬಳಿ ಸುಳಿಯುವುದಿಲ್ಲ. ಹಾಲಿನಲ್ಲಿರುವ ಪೊಟ್ಯಾಸಿಯಮ್ ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.
ನಿದ್ರೆಯ ಗುಣಮಟ್ಟ ಸುಧಾರಣೆ
ಹಾಲಿನಲ್ಲಿ ಮೆಲಟೋನಿನ್ ಅಂಶವಿರುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ ಮತ್ತು ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ಹಾಲು ಕುಡಿಯುವುದರಿಂದ ಮಧುಮೇಹ ಮತ್ತು ತೂಕವನ್ನು ಕಡಿಮೆ ಮಾಡಬಹುದು. ಹಾಲು ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಮತ್ತು ಕೊಬ್ಬಿನ ಸಮತೋಲಿತ ಮಿಶ್ರಣವನ್ನು ಹೊಂದಿರುತ್ತದೆ. ಇದು ನಮ್ಮನ್ನು ದೀರ್ಘಕಾಲ ಹಸಿವಿನಿಂದ ದೂರವಿರಿಸುತ್ತದೆ.
ಚರ್ಮ ಮತ್ತು ಕೂದಲಿನ ಆರೋಗ್ಯ
ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದರಿಂದ ಚರ್ಮ ಮತ್ತು ಕೂದಲಿನ ಆರೋಗ್ಯವೂ ಉತ್ತಮವಾಗಿರುತ್ತದೆ. ದಿನನಿತ್ಯ ಹಾಲು ಕುಡಿಯುವವರು ಸುಂದರವಾದ ತ್ವಚೆಯನ್ನು ಹೊಂದಿರುತ್ತಾರೆ. ಕೂದಲು ಕೂಡ ದಟ್ಟವಾಗಿರುತ್ತದೆ.