alex Certify ಮೀನುಗಾರರ ಬಲೆಗೆ ಬಿತ್ತು ಭಾರೀ ತಿಮಿಂಗಿಲ…! ಸಮುದ್ರಕ್ಕೆ ಮರಳಿ ಬಿಟ್ಟ ವನ್ಯಜೀವಿ ಸಂರಕ್ಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನುಗಾರರ ಬಲೆಗೆ ಬಿತ್ತು ಭಾರೀ ತಿಮಿಂಗಿಲ…! ಸಮುದ್ರಕ್ಕೆ ಮರಳಿ ಬಿಟ್ಟ ವನ್ಯಜೀವಿ ಸಂರಕ್ಷಕರು

ವಿಶಾಖಪಟ್ಟಣಂನ ಮೀನುಗಾರರ ಬಲೆಯೊಂದಕ್ಕೆ ಸಿಲುಕಿದ್ದ ಭಾರೀ ಗಾತ್ರದ ಶಾರ್ಕ್ ಒಂದನ್ನು ಮರಳಿ ಸಮುದ್ರಕ್ಕೆ ಬಿಡಲಾಗಿದೆ. ಜಗತ್ತಿನ ಅತಿ ದೊಡ್ಡ ಮೀನು ಎಂದು ಈ ವೇಲ್ ಶಾರ್ಕ್‌‌ಗಳನ್ನು ಕರೆಯಲಾಗುತ್ತದೆ.

“ನಗರದ ತಂಟಾಡಿ ತೀರದಲ್ಲಿ ಹಾಕಲಾಗಿದ್ದ ಬಲೆಯೊಂದಕ್ಕೆ ಸಿಲುಕಿದ 2-ಟನ್ ತೂಕದ ಈ ವೇಲ್ ಶಾರ್ಕ್‌ ಅನ್ನು ಅರಣ್ಯ ಇಲಾಖೆ, ಮೀನುಗಾರರು ಮತ್ತು ವನ್ಯಜೀವಿ ಸಂರಕ್ಷಕರ ನಡುವಿನ ಭಾರೀ ಹೊಂದಾಣಿಕೆಯಿಂದ ಮತ್ತು ಸಹಯೋಗದಿಂದ ಜೀವಂತವಾಗಿ ಮರಳಿ ಸಮುದ್ರಕ್ಕೆ ಕಳುಹಿಸಲಾಗಿದೆ. ಶಾರ್ಕ್ ಯಶಸ್ವಿಯಾಗಿ ಸಮುದ್ರದಾಳಕ್ಕೆ ಈಜಿಕೊಂಡು ಹೋಗಿ ಸೇರಿದೆ,” ಎಂದು ಜಿಲ್ಲಾ ಅರಣ್ಯಾಧಿಕಾರಿ ಅನಂತ್‌ ಶಂಕರ್‌ ತಿಳಿಸಿದ್ದಾರೆ.

BIG NEWS: ʼಒಮಿಕ್ರಾನ್‌ʼನಿಂದ ತತ್ತರಿಸಿರುವ ಪಾಶ್ಚಾತ್ಯ ಜಗತ್ತನ್ನು ಮತ್ತಷ್ಟು ಕಂಗೆಡಿಸಿದೆ ’ಡೆಲ್ಮಿಕ್ರಾನ್‌’

ಮಾಲ್ಡೀವ್ಸ್ ತಿಮಿಂಗಿಲ ಶಾರ್ಕ್ ಸಂಶೋಧನಾ ಕಾರ್ಯಕ್ರಮದೊಂದಿಗೆ ಶಾರ್ಕ್‌ನ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಆ ಜೀವಿಯ ಚಲನವಲನ ಮತ್ತು ಜೀವಿಸುವ ಪ್ರದೇಶಗಳ ಬಗ್ಗೆ ಅರಿತುಕೊಂಡಿದ್ದಾರೆ ಅರಣ್ಯ ಇಲಾಖೆ ಸಿಬ್ಬಂದಿ.

ಘಟನೆ ಬಳಿಕ, ಇಂಥ ಜೀವಿಗಳು ಮತ್ತೆ ಕಾಣಿಸಿಕೊಂಡಲ್ಲಿ ಇಲಾಖೆಯ ಗಮನಕ್ಕೆ ತಂದು ಅವುಗಳನ್ನು ಸುರಕ್ಷಿತವಾಗಿ ಮರಳಿ ಸಮುದ್ರಕ್ಕೆ ಸೇರಿಸಲು ಅನುವಾಗುವಂತೆ ಅಲ್ಲಿನ ಮೀನುಗಾರರನ್ನು ಕೋರಲಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...