alex Certify ಒಂದೇ ಬಾರಿ ನೂರಾರು ಮೀನುಗಳನ್ನು ಗುಳುಂ ಮಾಡಿದ ತಿಮಿಂಗಲ…! ಕುತೂಹಲಕಾರಿ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಬಾರಿ ನೂರಾರು ಮೀನುಗಳನ್ನು ಗುಳುಂ ಮಾಡಿದ ತಿಮಿಂಗಲ…! ಕುತೂಹಲಕಾರಿ ವಿಡಿಯೋ ವೈರಲ್​

ಪ್ರಕೃತಿಯಲ್ಲಿ ಅಡಗಿರುವ ವಿಸ್ಮಯಗಳು ಹಲವು. ಮನುಷ್ಯದ ಊಹೆಗೂ ನಿಲುಕದಂಥ ಹಲವು ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂಥವುಗಳಲ್ಲಿ ಕೆಲವೊಂದನ್ನಷ್ಟೇ ಭೇದಿಸಲು ಮನುಷ್ಯರಿಗೆ ಸಾಧ್ಯ. ಅದರಲ್ಲಿಯೂ ಜಲಚರಗಳ ಬಗ್ಗೆ ತಿಳಿದಷ್ಟೂ, ಅರಿತಷ್ಟೂ ಕುತೂಹಲವೇ. ಅಂಥದ್ದೊಂದು ಭಯಾನಕ ಹಾಗೂ ಕುತೂಹಲದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬೃಹತ್​ ತಿಮಿಂಗಲವೊಂದು ನೂರಾರು ಮೀನುಗಳನ್ನು ಒಂದೇ ಬಾರಿ ಗುಳುಂ ಮಾಡುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಹಲವಾರು ಸಣ್ಣ ಸಣ್ಣ ಮೀನುಗಳನ್ನು ನುಂಗುವ ದೃಶ್ಯವಿದು. ವಿಡಿಯೋದಲ್ಲಿ ತಿಮಿಂಗಲು ದೊಡ್ಡದಾಗಿ ಬಾಯಿಯನ್ನು ತೆರೆದುಕೊಂಡಿರುವುದನ್ನು ಕಾಣಬಹುದು.

ಚಿಕ್ಕಚಿಕ್ಕ ಮೀನುಗಳು ಇಲ್ಲಿ ತಮ್ಮ ಸಾವು ಅಡಗಿದೆ ಎಂಬ ಅರಿವು ಇಲ್ಲದೇ ಈಜುತ್ತಿವೆ. ಆದರೆ ಒಂದೊಂದಾಗಿ ತಿಮಿಂಗಲದ ಬಾಯನ್ನು ಸೇರಿವೆ. ಇವುಗಳನ್ನು ಅಷ್ಟೇ ಅಚ್ಚರಿಯ ರೀತಿಯಲ್ಲಿ ವಿಶೇಷ ತಂತ್ರದೊಂದಿಗೆ ವಿಡಿಯೋ ಮಾಡಲಾಗಿದ್ದು, ಇದೀಗ ವೈರಲ್​ ಆಗಿದೆ. ಈ ವಿಡಿಯೋ ಇದಾಗಲೇ 11 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...