ನಮ್ಮ ಗ್ರಹದ ಆಚೆಗೂ ಜೀವಿಗಳು ಇದ್ದಾರೆ ಎಂದು ಅನ್ವೇಷಣೆ ಮಾಡುವುದು ಮನುಕುಲದ ಇತಿಹಾಸದ ಅತ್ಯಂತ ದೊಡ್ಡ ಬೆಳವಣಿಗೆಗಳಲ್ಲಿ ಒಂದಾಗಿದೆ.
ಅನ್ಯ ಜಗದ ವಸ್ತುವೊಂದು ನಮ್ಮ ಸೌರಮಂಡಲದ ಮೂಲಕ 2017ರಲ್ಲಿ ಹಾದು ಹೋಗಿದ್ದು, ಇದು ಹೊರಲೋಕದ ತಂತ್ರಜ್ಞಾನವೇ ಇರಬಹುದು ಎಂದು ಸಾಕ್ಷೀಕರಿಸಿ ಅಗ್ರ ಖಗೋಳಶಾಸ್ತ್ರಜ್ಞರೊಬ್ಬರು ಸರಳವಾದ ವಿವರಣೆ ಕೊಟ್ಟು ಬರೆದಿರುವ ಪುಸ್ತಕವೊಂದು ಹೊರಬಂದಿದೆ.
ಮತ್ತೊಂದು ನಕ್ಷತ್ರದಿಂದ ಬಂದಿರಬಹುದು ಎನ್ನಲಾದ ಈ ವಸ್ತು ಬಲು ಬೇಗ ಚಲಿಸುತ್ತಿರುವುನ್ನು ಅಕ್ಟೋಬರ್ 2017ರಲ್ಲಿ ವಿಜ್ಞಾನಿಗಳು ಗಮನಿಸಿದ್ದಾರೆ. ನಿಗೂಢ ಬಲವೊಂದರಿಂದ ಚಲಿಸುತ್ತಿದ್ದ ಈ ವಸ್ತು, ಸೂರ್ಯನ ಸುತ್ತ ಗಿರಕಿ ಹೊಡೆಯುತ್ತಿದ್ದ ವೇಳೆ ತನ್ನ ನಿರೀಕ್ಷಿತ ಪಥದಿಂದ ವಿಮುಖವಾಗಿತ್ತು.
ಹಾರ್ವಡ್ ವಿವಿಯ ಖಗೋಳಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಅವಿ ಲೋಯೆಬ್ ಈ ವಿಷಯದ ಬಗ್ಗೆ ನೂರಾರು ಸಂಶೊಧನಾ ಪತ್ರಗಳನ್ನು ಬರೆದಿದ್ದಾರೆ. ಸ್ಟೀಫನ್ ಹಾಕಿಂಗ್‌ರಂಥ ಶ್ರೇಷ್ಠ ವಿಜ್ಞಾನಿಗಳೊಂದಿಗೆ ಕೆಲಸ ಮಾಡಿರುವ ಲೋಯೆಬ್, “ನಾವು ನಮ್ಮನ್ನೇ ವಿಶೇಷ ಜೀವಿಗಳು ಎಂದುಕೊಳ್ಳುವುದು ದುರಹಂಕಾರ. ಸರಿಯಾದ ಹಾದಿ ಎಂದರೆ; ನಾವು ವಿಶೇಷರಲ್ಲ, ಅನೇಕ ರೀತಿಯ ಸಂಸ್ಕೃತಿಗಳು ಇಲ್ಲಿವೆ, ನಾವು ಅವುಗಳನ್ನು ಕಂಡುಕೊಳ್ಳಬೇಕಷ್ಟೇ” ಎಂದಿದ್ದಾರೆ.