alex Certify ಮದುವೆಗೆ ತೆರಳುತ್ತಿದ್ದಾಗ ಕೆಟ್ಟು ನಿಂತ ವಧುವಿದ್ದ ವಾಹನ: ಆಮೇಲೆನಾಯ್ತು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ತೆರಳುತ್ತಿದ್ದಾಗ ಕೆಟ್ಟು ನಿಂತ ವಧುವಿದ್ದ ವಾಹನ: ಆಮೇಲೆನಾಯ್ತು ಗೊತ್ತಾ…?

ನಾಟಿಂಗ್ ಹ್ಯಾಮ್ ಶೈರ್: ತಮ್ಮ ಮದುವೆಯ ದಿನದ ಕ್ಷಣಗಳು ಸುಂದರವಾಗಿರಬೇಕು ಅಂತಾ ಹಲವರು ಕಲ್ಪಿಸಿಕೊಂಡಿರುತ್ತಾರೆ. ಇನ್ನು ಮದುವೆಗೆ ದಿಬ್ಬಣ ಹೊರಡುವಾಗವಂತೂ ವಧು ಯಾವ ರೀತಿ ಸಿದ್ಧಳಾಗಿರುತ್ತಾಳೆಂದರೆ ಅದನ್ನು ವರ್ಣಿಸಲು ಪದಗಳು ಸಾಲುವುದಿಲ್ಲ. ಆದರೆ ದಿಬ್ಬಣ ಹೊರಡುವಾಗ ಕಾರು ಕೆಟ್ಟೋದರೆ ಏನು ಮಾಡುವುದು..? ಇಲ್ಲೊಬ್ಬಳು ವಧುವಿಗೂ ಇದೇ ಪರಿಸ್ಥಿತಿ ಎದುರಾಯ್ತು…..

ತನ್ನ ಹೆತ್ತವರೊಂದಿಗೆ ಚರ್ಚ್ ಗೆ ತೆರಳುತ್ತಿದ್ದ ಆಕೆಯ ಕಾರು 5 ಮೈಲುಗಳ ದೂರದ ನಂತರ ಇದ್ದಕ್ಕಿದ್ದಂತೆ ಕೆಟ್ಟು ನಿಂತಿದೆ. ಇದರಿಂದ ಕಂಗೆಟ್ಟ ವಧು ಹಾಗೂ ಪೋಷಕರು ಏನು ಮಾಡುವುದು ಎಂದು ತೋಚದಾದರು. ಈ ವೇಳೆ ಆಪದ್ಭಾಂಧವನಂತೆ ಬಂದ ಟ್ರಾಫಿಕ್ ಪೊಲೀಸ್ ನೆರವಿಗೆ ಮುಂದಾದರು. ಕೂಡಲೇ ವಧು ಹಾಗೂ ಪೋಷಕರನ್ನು ವಿವಾಹ ನಡೆಯಲಿದ್ದ ಚರ್ಚ್ ಗೆ ಕರೆತಂದರು. “ಪೊಲೀಸ್ ಮಾಡಿದ ಉಪಕಾರಕ್ಕೆ ಜೀವನದಲ್ಲೇ ನನಗೆ ನೆಮ್ಮದಿಯ ಕಣ್ಣೀರು ಬಂತು” ಅಂತಾ ವಧು ಹೇಳಿದ್ದಾಳೆ.

ಬೈಕ್, ಟಿವಿ, ಫ್ರಿಜ್ ಹೊಂದಿದ ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಪಡಿತರ ಚೀಟಿ ರದ್ದು ಮಾಡಲ್ಲವೆಂದು ಸ್ಪಷ್ಟನೆ

ಅಷ್ಟೇ ಅಲ್ಲ ಚರ್ಚ್ ಗೆ ತಲುಪಿದಾಗ ಪೊಲೀಸ್ ಬಳಿ ವಧು ಬೇಡಿಕೆಯಿಟ್ಟಿದ್ದಾಳೆ. ಅದು ಇಬ್ಬರೂ ಕೂಡ ಒಟ್ಟಿಗೆ ಒಳ ಪ್ರವೇಶಿಸಬೇಕೆಂಬುದಾಗಿತ್ತು. ವಧುವಿನ ಬೇಡಿಕೆಗೊಪ್ಪಿದ ಟ್ರಾಫಿಕ್ ಪೊಲೀಸ್ ಸಮವಸ್ತ್ರಧಾರಿಯಾಗಿ ವಧುವಿನ ಜೊತೆಯಲ್ಲಿ ಒಳಾಂಗಣ ಪ್ರವೇಶಿಸಿದರು. ಸದ್ಯ, ಈ ಫೋಟೋ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗಿದೆ.

https://www.facebook.com/photo.php?fbid=10165778066975061&set=a.10150712633345061&type=3

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...