ಕೀವ್: ಉಕ್ರೇನ್ ಮೇಲೆ ಭೀಕರ ದಾಳಿಗಾಗಿ ರಷ್ಯಾ ಸೇನೆ ಮುನ್ನುಗ್ಗಿ ಬರುತ್ತಿರುವ ಮಧ್ಯೆಯೇ ಯುದ್ಧ ಭೂಮಿಯಲ್ಲಿ ನಿಂತು ಸೇನಾ ಜೋಡಿಯೊಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಘಟನೆ ಉಕ್ರೇನ್ ರಾಜಧಾನಿ ಕೀವ್ ನಲ್ಲಿ ನಡೆದಿದೆ.
ಕೀವ್ ಹೊರವಲಯದಲ್ಲಿ ರಷ್ಯಾ ಒಂದೆಡೆ ಕ್ಷಿಪಣಿ ದಾಳಿ ನಡೆಸುತ್ತಿದೆ. ಕೀವ್ ನ ಚೆಕ್ ಪಾಯಿಂಟ್ ನಲ್ಲಿ ಸೇನಾ ಹೋರಾಟಗಾರರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬ್ರಿಗೇಡ್ 112ರ ಲೇಸ್ಯಾ ಹಾಗೂ ವ್ಯಾಲೆರಿ ಎಂಬ ಉಕ್ರೇನ್ ಯೋಧರಿಬ್ಬರು ವಿವಾಹವಾಗಿದ್ದಾರೆ. ಇಬ್ಬರು ಕೀವ್ ನ ಫ್ರಂಟ್ ಲೈನ್ ನಲ್ಲಿ ನಿಂತು ರಷ್ಯಾ ವಿರುದ್ಧ ಹೋರಾಟ ನಡೆಸಿದ್ದಾರೆ.
ಎಸಿಬಿ ದಾಳಿ ಬಳಿಕ ಬಿಬಿಎಂಪಿ ವಿರುದ್ಧ ದೂರುಗಳ ಸುರಿಮಳೆ..! ಭ್ರಷ್ಟ ಅಧಿಕಾರಿಗಳಿಗೆ ಶುರುವಾಯ್ತು ನಡುಕ
ಕಳೆದ 22 ವರ್ಷಗಳಿಂದ ಒಟ್ಟಿಗೆ ಇದ್ದ ಈ ಜೋಡಿ 18 ವರ್ಷದ ಮಗಳನ್ನು ಹೊಂದಿದ್ದಾರೆ. ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದಾಗಿನಿಂದ ಲೇಸ್ಯಾ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ಕೀವ್ ಹೊರವಲಯದಲ್ಲಿ ತನ್ನ ಜಿಲ್ಲೆಯ ರಕ್ಷಣೆಗಾಗಿ ಪ್ರಾದೇಶಿಕ ರಕ್ಷಣಾ ಪಡೆ ಸೇರಿದ್ದರು.
ಯುದ್ಧ ಆರಂಭವಾದಾಗಿನಿಂದ ಲೇಸ್ಯಾ ಹಾಗೂ ವ್ಯಾಲೆರಿ ಪರಸ್ಪರ ಭೇಟಿಯಾಗಿರಲಿಲ್ಲ. ಇದೀಗ ಕೀವ್ ಯುದ್ಧ ಭೂಮಿಯಲ್ಲಿ ತಮ್ಮ ಮಗಳ ಸಮ್ಮುಖದಲ್ಲಿಯೇ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ. ಸುತ್ತಲು ನೆರೆದಿದ್ದ ಉಕ್ರೇನ್ ಸೈನಿಕರು ಹಾಡುಗಳನ್ನು ಹಾಡಿ ನವ ದಂಪತಿಗೆ ಶುಭಕೋರಿದ್ದಾರೆ.