ವೆಬ್ ವಿನ್ಯಾಸಕಾರನಾಗಿ ಕೆಲಸ ಮಾಡುವ ಫಿಲಿಪ್ಪೀನ್ಸ್‌ನ ಮ್ಯಾಕ್ ಪಾಸ್ಕೌಲ್, ಹೊಸದಾಗಿ ಜನಿಸಿದ ತನ್ನ ಮಗನಿಗೆ ಹೈಪರ್‌ಟೆಕ್ಸ್ಟ್ ಮಾರ್ಕಪ್ ಲ್ಯಾಂಗ್ವೇಜ್ (ಎಚ್‌ಟಿಎಂಎಲ್) ಎಂದು ಹೆಸರಿಡುವ ಮೂಲಕ ತನ್ನ ವೃತ್ತಿಗೆ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ.
ತಮ್ಮ ಕುಟುಂಬದಲ್ಲಿ ಹೀಗೆ ವಿಶಿಷ್ಟ ಹೆಸರುಗಳನ್ನು ಇಟ್ಟುಕೊಳ್ಳುವುದು ಒಂದು ಅಭ್ಯಾಸವಾಗಿದೆ ಎನ್ನುವ ಪಸ್ಕೌಲ್, ತಮ್ಮದೇ ಖುದ್ದು ಹೆಸರು ಮ್ಯಾಕ್ರೋನಿ 85ಗೆ ನಿಕಟವಾಗಿದೆ ಎನ್ನುತ್ತಾರೆ.
DTH, ಕೇಬಲ್ ಟಿವಿ ವೀಕ್ಷಕರಿಗೆ ಮತ್ತೊಂದು ಗುಡ್ ನ್ಯೂಸ್: ಟ್ರಾಯ್ ನಿಂದ ಟಿವಿ ಚಾನಲ್ ಆಯ್ಕೆಗೆ ವೆಬ್ ಸೈಟ್
ಇಲ್ಲಿನ ಬುಲಾಕನ್ ಮೆಡಿಕಲ್ ಮಿಶನ್ ಗ್ರೂಪ್ ಆಸ್ಪತ್ರೆಯಲ್ಲಿ ಜನಿಸಿದ ಎಚ್‌ಟಿಎಂಎಲ್ 4.9 ಪೌಂಡ್‌ಗಳಷ್ಟು ತೂಕವಿದ್ದಾನೆ. ಆತನನ್ನು ಆತನ ಸಹೋದರತ್ತೆ ಸಿನ್ಸಿಯರ್ಲಿ ಪಾಸ್ಕೌಲ್, “ಜಗತ್ತಿಗೆ ಸ್ವಾಗತ ಎಚ್‌ಟಿಎಂಎಲ್” ಎಂದು ಫೇಸ್ಬುಕ್‌ನಲ್ಲಿ ಟೈಪ್ ಮಾಡಿ ಜಗತ್ತಿಗೆ ಪರಿಚಯಿಸಿದ್ದಾರೆ.