ಕೋವಿಡ್ 19ನಿಂದಾಗಿ ಎಲ್ಲರ ಜೀವನ ಸಂಪೂರ್ಣ ಬದಲಾಗಿ ಹೋಗಿದೆ. ಕೊರೊನಾ 2ನೆ ಅಲೆಯ ತೀವ್ರತೆ ಕಡಿಮೆ ಆದರೂ ಸಹ ಸಾಂಕ್ರಾಮಿಕದ ಭಯ ಕಡಿಮೆಯಾಗಿಲ್ಲ. ಕೋವಿಡ್ ಲಸಿಕೆಯನ್ನು ಪಡೆದಿದ್ದರೂ ಸಹ ಮಾಸ್ಕ್ ಧರಿಸೋದು ಮಾತ್ರ ತಪ್ಪಿದ್ದಲ್ಲ.
ಈಗಂತೂ ಕೊರೊನಾ ಭಯದಿಂದಾಗಿ ಎರಡೆರಡು ಮಾಸ್ಕ್ಗಳನ್ನು ಧರಿಸುವಂತೆ ತಜ್ಞರು ಸಲಹೆ ನೀಡುತ್ತಿದ್ದಾರೆ. ಆದರೆ ಎರಡು ಮಾಸ್ಕ್ ಬಳಕೆಯಿಂದಾಗಿ ಅನೇಕರಲ್ಲಿ ತ್ವಚೆಯ ಆರೋಗ್ಯ ಕೆಡುತ್ತಿದೆ. ಇದಕ್ಕಾಗಿ ನೀವು ಈ ಕೆಳಗಿನ ಸಲಹೆಗಳನ್ನು ಸ್ವೀಕರಿಸಬಹುದಾಗಿದೆ.
ತ್ವಚೆ ಆರೋಗ್ಯವನ್ನು ಕಾಪಾಡುವುದು ಮುಖ್ಯವಾದ ಕೆಲಸವಾಗಿದೆ. ಮುಖವನ್ನು ಸೂಕ್ತವಾದ ಫೇಸ್ವಾಶ್ನಿಂದ ತೊಳೆದ ಬಳಿಕ ಟೋನರ್ನಿಂದ ಸ್ವಚ್ಛಗೊಳಿಸಿ. ಇದಾದ ಬಳಿಕ ನಿಮ್ಮಿಷ್ಟದ ಮಾಯಶ್ಚೂರೈಸರ್ ಹಚ್ಚಿ. ಬೆಳಗ್ಗೆ ಹಾಗೂ ರಾತ್ರಿ ಈ ಕೆಲಸವನ್ನು ತಪ್ಪದೆ ಮಾಡಿ.
ಯಾವಾಗಲೂ ನೀರನ್ನು ಕುಡಿಯುತ್ತಲೇ ಇರಬೇಕು. ಚರ್ಮವು ಶುಷ್ಕವಾದರೆ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಮುಖಕ್ಕೆ ಮಾಯಶ್ಚೂರೈಸರ್ ಹಚ್ಚಿಕೊಳ್ಳೋದ್ರ ಜೊತೆಗೆ ಸಾಧ್ಯವಾದಷ್ಟು ನೀರನ್ನು ಕುಡಿಯಿರಿ. ಇದರಿಂದ ಮುಖ ಕಾಂತಿಯಿಂದ ಇರಲಿದೆ.
ಮಾಸ್ಕ್ ಧರಿಸುವ ಸಂದರ್ಭದಲ್ಲಿ ಅತಿಯಾದ ಮೇಕಪ್ ಬೇಡ್ವೇ ಬೇಡ. ಮಿತವಾದ ಮೇಕಪ್ ಮಾಡಿಕೊಳ್ಳಿ. ಇದರಿಂದ ಮುಖದಲ್ಲಿ ಮೊಡವೆ ಸಮಸ್ಯೆ ಕಾಣಿಸೋದಿಲ್ಲ.
ಅನೇಕರು ಅಂದ ಹೆಚ್ಚಿಸಲು ಫ್ಯಾನ್ಸಿ ಮಾಸ್ಕ್ ಬಳಕೆ ಮಾಡುತ್ತಾರೆ. ಆದರೆ ಈ ತಪ್ಪು ಕೆಲಸ ಮಾಡಬೇಡಿ. ಆದಷ್ಟು ಉತ್ತಮ ಗುಣಮಟ್ಟದ ಮಾಸ್ಕ್ ಬಳಕೆ ಮಾಡಿ. ಇದರಿಂದ ವೈರಸ್ನಿಂದ ರಕ್ಷಣೆ ಸಿಗೋದ್ರ ಜೊತೆಗೆ ನಿಮ್ಮ ಮುಖದ ಆರೋಗ್ಯ ಕೂಡ ಚೆನ್ನಾಗಿ ಇರಲಿದೆ.