ಪಾನಮತ್ತಳಾಗಿ ವಾಹನ ಚಲಾಯಿಸುತ್ತಿದ್ದ 24 ವರ್ಷದ ಯುವತಿಯೊಬ್ಬಳು, ವಾಹನ ಚಾಲನೆ ಮಾಡದಂತೆ ಆದೇಶ ನೀಡಿದರೆ ತಾನು ಸಾರ್ವಜನಿಕ ಸಾರಿಗೆ ಅವಲಂಬಿಸಬೇಕಾಗುತ್ತದೆ ಎಂದು ನ್ಯಾಯಾಧೀಶರ ಬಳಿ ಬೇಡಿಕೊಂಡಿದ್ದಾಳೆ.
ಸಾವಿನಲ್ಲೂ ಸಾರ್ಥಕತೆ: ಅಂಗಾಂಗ ದಾನದ ಮೂಲಕ ಮೂವರ ಜೀವ ಕಾಪಾಡಿದ ಮಹಾನುಭಾವ
ಆಗಸ್ಟ್ 15ರ ರಾತ್ರಿಯಂದು ಕೇ ಹೊಲ್ಕ್ರಾಫ್ಟ್ ಹೆಸರಿನ ಈಕೆ ಮ್ಯಾಂಚೆಸ್ಟರ್ನಿಂದ ಚೆಶೈರ್ಗೆ ರೈಲೊಂದರಲ್ಲಿ ಬಂದು ಬಿಳಿ ಬಣ್ಣದ ಬಿಎಂಡಬ್ಲ್ಯೂ 1 ಸೀರೀಸ್ 116ಡಿ ಕಾರನ್ನು ತನ್ನ ಮನೆಗೆ ಚಲಾಯಿಸಿಕೊಂಡು ತೆರಳಿದ್ದಾರೆ.
ಈ ವೇಳೆ ಕೇ ಕಾರನ್ನು ಎರ್ರಾಬಿರ್ರಿ ಚಲಿಸುತ್ತಿರುವುದನ್ನು ಗಮನಿಸಿದ ಸಂಚಾರಿ ಪೊಲೀಸರು ಆಕೆಯ ಉಸಿರಾಟದ ಪರೀಕ್ಷೆ ಮಾಡಿದ್ದಾರೆ. ಈ ವೇಳೆ, ಮಿತಿಗಿಂತ 21 ಅಂಶಗಳಷ್ಟು ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಮೀಟರ್ನಲ್ಲಿ ಕಂಡುಬಂದ ಕಾರಣ ಕೇ 15 ತಿಂಗಳ ಮಟ್ಟಿಗೆ ಡ್ರೈವಿಂಗ್ ಮಾಡದಂತೆ ನಿಷೇಧ ಹೇರಲಾಗಿದೆ.
ಹೋಟೆಲ್ನ ಜಾಮೂನ್ ನಲ್ಲಿ ಸಿಕ್ಕಿತ್ತು ಸತ್ತ ಜಿರಳೆ: ನ್ಯಾಯಕ್ಕಾಗಿ ಮೊರೆ ಹೋದ ಗ್ರಾಹಕನಿಗೆ ಸಿಗ್ತು 55 ಸಾವಿರ ರೂ. ಪರಿಹಾರ
ಇಲ್ಲಿನ ಸ್ಟಾಕ್ಪೋರ್ಟ್ ಮ್ಯಾಜಿಸ್ಟ್ರೇಟರ ಎದುರು ಹಾಜರಾದ ಕೇಗೆ 200 ಪೌಂಡ್ ದಂಡ ವಿಧಿಸಲಾಗಿದೆ.