ಜಗತ್ತಿನ ಯಾವುದೇ ಮೂಲೆಯಲ್ಲಿ ಇರಲಿ, ಯಾವುದೇ ಸಮಾರಂಭವೆಂದರೆ ಅಲ್ಲಿ ಸಿಹಿ ತಿನಿಸಿರಲೇಬೇಕು. ಬಹಳಷ್ಟು ಸಂದರ್ಭಗಳಲ್ಲಿ ಕೇಕ್‌ಅನ್ನು ಬಳಸಲಾಗುತ್ತದೆ. ಹುಟ್ಟುಹಬ್ಬ, ಮದುವೆ, ಹಬ್ಬ, ವಾರ್ಷಿಕೋತ್ಸವ ಹೀಗೇ ಯಾವುದೇ ಸಮಾರಂಭವಿರಲಿ, ಆ ದಿನವನ್ನು ಸ್ಮರಣೀಯವಾಗಿಸಲು ಕೇಕುಗಳು ಇರಲೇ ಬೇಕು ಎನ್ನುವಂತಾಗಿದೆ.
ಆದರೆ ಈ ಕೇಕುಗಳು ಸಾಮಾನ್ಯವಾಗಿ ಖಾಲಿಯಾಗುವುದು ಕಷ್ಟ. ಹೀಗಾದ ಸಂದರ್ಭದಲ್ಲಿ ಉಳಿದಕೊಂಡ ಕೇಕ್‌ಅನ್ನು ಸಂಗ್ರಹಿಸಿಡಲು ಜನರು ಬಹಳಷ್ಟು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಕೇಕ್‌ಅನ್ನು ಸದಾ ಫ್ರೆಶ್ ಆಗಿಡಬಹುದಾದ ಉಪಾಯವೊಂದನ್ನು ಹೇಳಿಕೊಡುವ ವಿಡಿಯೋವೊಂದು ವೈರಲ್ ಆಗಿದೆ.
14 ಸೆಕೆಂಡುಗಳ ಈ ಪುಟ್ಟ ವಿಡಿಯೋದಲ್ಲಿ ಸ್ವಲ್ಪ ತಿಂದುಬಿಟ್ಟ ಕೇಕನ್ನು ಕಂಟೇನರ್ ಒಂದರೊಳಗೆ ಇಟ್ಟು ಶೇಖರಿಸಿಡುವ ಟ್ರಿಕ್ ಒಂದನ್ನು ಹೇಳಲಾಗಿದೆ. ಈ ಉಪಯುಕ್ತವಾದ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ ನೆಟ್ಟಿಗರೊಬ್ಬರು, “ಈ ವಿಚಾರ ನನಗೆ ಯಾವತ್ತೂ ಹೊಳೆದೇ ಇಲ್ಲ ಎಂಬ ಕಾರಣಕ್ಕೆ ನನಗೆ ಸಿಟ್ಟು ಬಂದಿದೆ,” ಎಂದು ಹೇಳಿಕೊಂಡು ಶೇರ್ ಮಾಡಿದ್ದಾರೆ.
ಈ ವಿಡಿಯೋಗೆ ಅದಾಗಲೇ 18 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಸಿಕ್ಕಿವೆ.