ಆರೋಗ್ಯಪೂರ್ಣ ಬದುಕು ಸಾಗಿಸಲು ಆರೋಗ್ಯಯುತ ಪಥ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ. ಇಲ್ಲೊಬ್ಬ 11 ವರ್ಷ ವಯಸ್ಸಿನ ಮಗಳ ತಾಯಿಯೊಬ್ಬರು ತಮ್ಮ ಮಗಳ ಶರೀರದ ತೂಕವನ್ನು ಆರೋಗ್ಯಪೂರ್ಣ ಮಟ್ಟಕ್ಕೆ ತರಲು ಆಕೆಯನ್ನು ಕೀಟೋ ಪಥ್ಯಕ್ಕೆ ಒಳಪಡಿಸಿರುವುದು ನೆಟ್ಟಿಗರಲ್ಲಿ ಮಿಶ್ರ ಪ್ರತಿಕ್ರಿಯೆಗೆ ಗ್ರಾಸವಾಗಿದೆ.
ತನ್ನ ಮಗಳ ಕೀಟೋ ಪಥ್ಯದ ಐಡಿಯಾ ಕೊಡಲೆಂದು, ಆಕೆಯ ಲಂಚ್ ಬಾಕ್ಸ್‌ನಲ್ಲಿ ಲೆಟ್ಟಸ್ ರಾಪ್, ಶ್ರೆಡ್ಡೆಡ್ ಚಿಕನ್, ಚೆದ್ದರ್ ಗಿಣ್ಣು, ಬೇಯಿಸಿದ ಮೊಟ್ಟೆಯ ಮೇನ್ ಕೋರ್ಸ್ ಜೊತೆಗೆ ಕಲ್ಲಂಗಡಿ ಹಾಗೂ ಸ್ಟ್ರಾಬೆರ‍್ರಿ ಹಣ್ಣುಗಳ ಸೈಡ್ ಕೋರ್ಸ್ ಇರುವ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಶೇರ್ ಮಾಡಿದ್ದಾರೆ ಅಬ್ಬಿ ಹೆಸರಿನ ಈ ಮಹಿಳೆ.
161 ವರ್ಷಗಳಿಂದ ಬಗೆಹರಿಸಲಾಗದ ಗಣಿತ ಸಮಸ್ಯೆಗೆ ಕೊನೆಗೂ ಸಿಕ್ತು ಪರಿಹಾರ…!
ತಮ್ಮ ಸಾಕುನಾಯಿ ಒಳಗೊಂಡಂತೆ ತಮ್ಮ ಇಡೀ ಕುಟುಂಬ ಕೀಟೋ ಡಯೆಟ್ ಪ್ಲಾನ್ ಅನ್ನು ಹೇಗೆ ಫಾಲೋ ಮಾಡುತ್ತಿದೆ ಎಂದು ವಿಡಿಯೋದಲ್ಲಿ ಮಹಿಳೆ ವಿವರಿಸಿದ್ದಾರೆ.
ಈ ವಿಡಿಯೋಗೆ ಭಾರೀ ಟೀಕೆಗಳು ವ್ಯಕ್ತವಾಗಿವೆ. ಪ್ರತಿನಿತ್ಯದ ಪಥ್ಯದಲ್ಲಿ ಒಳ್ಳೆಯ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್‌ಗಳ ಅಗತ್ಯವಿದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಬ್ಬಿ, ಕೇವಲ ತೂಕ ಇಳಿಸುವುದು ಮಾತ್ರ ಈ ಈ ಪಥ್ಯದ ಉದ್ದೇಶವಲ್ಲ ಎಂದಿದ್ದಾರೆ.