
ಪೆರುವಿನ ಜಲಪಾತ ಮದುವೆಯ ಡ್ರೆಸ್ ಮತ್ತು ಮುಸುಕು ಧರಿಸಿದ ವಧುವನ್ನು ಹೋಲುತ್ತದೆ, ಇದು ನೆಟ್ಟಿಗರನ್ನು ಅಚ್ಚರಿಗೆ ತಳ್ಳಿದೆ. ಪೆರು ದೇಶದ ಜಲಪಾತದ ಹಳೆಯ ವಿಡಿಯೋ ಈಗ ವೈರಲ್ ಆಗಿದ್ದು, ನೋಡುಗರು ಅಚ್ಚರಿ ಪಡುವಂತಿದೆ.
ಪ್ರಕೃತಿ ಮತ್ತು ಅದರ ಸೌಂದರ್ಯವು ಮನುಷ್ಯರನ್ನು ಮಂತ್ರಮುಗ್ಧರನ್ನಾಗಿಸುವ ಅನೇಕ ಸಂದರ್ಭಗಳಿವೆ. ಈ ರೀತಿಯ ಪ್ರಕೃತಿಯ ವಿಸ್ಮಯಕ್ಕೆ ಉತ್ತಮ ಉದಾಹರಣೆ ಪೆರುವಿನ ಈ ಜಲಪಾತ. ಇದನ್ನು ವಧುವಿನ ಫಾಲ್ಸ್ ಎಂದು ಕರೆಯಲಾಗುತ್ತದೆ. ಅ ವಿಶಿಷ್ಟ ಹೆಸರಿನ ಹಿಂದಿನ ಕಾರಣ ವಿಶೇಷವಾದದ್ದು.
2019ರಲ್ಲಿ ಜಲಪಾತದ ವಿಡಿಯೋವನ್ನು ಯೂಟ್ಯೂಬ್ ಚಾನಲ್ ಒಂದು ಶೇರ್ ಮಾಡಿತ್ತು. ಇದು ಜಲಪಾತದ ಅದ್ಭುತ ದೃಶ್ಯ ಒಳಗೊಂಡಿತ್ತು. ವಧುವಿನ ಉಡುಗೆ ಮತ್ತು ಮುಸುಕು ಧರಿಸಿದ ವಧುವಿನ ಹೋಲಿಕೆಯಿಂದಾಗಿ ಜಲಪಾತ ಹೆಸರನ್ನು ಪಡೆದುಕೊಂಡಿದೆ.