alex Certify BREAKING NEWS: ಆಟವಾಡುತ್ತಿದ್ದಾಗ ದುರಂತ: ನೀರಿನ ಸಂಪ್ ಗೆ ಬಿದ್ದು 5 ವರ್ಷದ ಬಾಲಕಿ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಆಟವಾಡುತ್ತಿದ್ದಾಗ ದುರಂತ: ನೀರಿನ ಸಂಪ್ ಗೆ ಬಿದ್ದು 5 ವರ್ಷದ ಬಾಲಕಿ ದುರ್ಮರಣ

ಬೆಂಗಳೂರು: ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ನೀರಿನ ಸಂಪ್ ಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ನಡೆದಿದೆ.

5 ವರ್ಷದ ಶಾಹಿದಾ ಬಾನು ಮೃತ ಬಾಲಕಿ. ಮನೆಯ ಕಾಂಪೌಂಡ್ ನಲ್ಲಿದ್ದ ನೀರಿನ ಸಂಪ್ ಗೆ ಬಿದ್ದು ಸಾವನ್ನಪ್ಪಿದ್ದಾಳೆ. ಶಾಹಿದಾ ಬಾನು, ಸೈಯದ್ ಹುಸೇನ್ ಹಾಗೂ ನಸ್ತಿನಾ ಬಾನು ದಂಪತಿಯ ಮಗಳು.

ಪಕ್ಕದ ಮನೆಯಲ್ಲಿದ್ದ ಬಿಹಾರ ಮೂಲದ ಹುಡುಗರು ಸಂಪ್ ಓಪನ್ ಮಾಡಿದ್ದರು. ಈ ವೇಳೆ ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ನೀರಿನ ಸಂಪ್ ಗೆ ಬಿದ್ದು ಸಾವನ್ನಪ್ಪಿದ್ದಾಳೆ. ಘಟನೆ ಬಳಿಕ ಬಿಹಾರ ಮೂಲದ ಹುಡುಗರು ಪರಾರಿಯಾಗಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...