ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ಸಖತ್ ಫೇಮಸ್ ಆಗಿರುವ ಅಮೆರಿಕ ಮೂಲದ ಕಂಟೆಂಟ್ ಕ್ರಿಯೇಟರ್ ಫಿಡಿಯಾಸ್ ಪನಾಯುಟೌ ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದಾರೆ ಹಾಗೂ ಬೆಂಗಳೂರಿನ ಅನೇಕ ಸ್ಥಳಗಳಲ್ಲಿ ರೀಲ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಈ ರೀಲ್ಸ್ಗಳು ಭಾರತೀಯರಿಗೆ ಹೆಚ್ಚು ಇಷ್ಟವಾದಂತೆ ಕಾಣುತ್ತಿಲ್ಲ.
ವಿದೇಶಿಗ ಪನಾಯುಟೌ ಶೇರ್ ಮಾಡಿರುವ ಪೋಸ್ಟ್ಗಳಲ್ಲಿ, ಅವರು ಸ್ಥಳೀಯ ಸಲೂನ್ಗಳಿಗೆ ಭೇಟಿ ನೀಡಿ ಅಲ್ಲಿಯ ಅವ್ಯವಸ್ಥೆ ಬಗ್ಗೆ ಮಾತನಾಡಿದ್ದನ್ನು ಕಾಣಬಹುದಾಗಿದೆ. ಅಲ್ಲದೇ ಬೀದಿ ಬದಿಯಲ್ಲಿ ಪೊಲೀಸರೊಂದಿಗೆ ವಾಕ್ಸಮರ ನಡೆಸಿದ್ದಾರೆ ಮಾತ್ರವಲ್ಲದೇ ಆಟೋ ಸವಾರಿ ಮಾಡಬೇಕಾದ ಸಂದರ್ಭದಲ್ಲಿ ಆಟೋ ಡ್ರೈವರ್ಗೆ ಚುಂಬಿಸಿದ್ದು ಅದರ ವಿಡಿಯೋ ಕೂಡ ಶೇರ್ ಮಾಡಿದ್ದಾರೆ..!
ಭಾರತ ಪ್ರವಾಸ ಕೈಗೊಂಡಿರೋ ಪನಾಯುಟೌ ಬೆಂಗಳೂರು ಮೆಟ್ರೋದಲ್ಲಿ ಅನಧಿಕೃತವಾಗಿ ಪ್ರಯಾಣ ಮಾಡಿದ ವಿಡಿಯೋ ಶೇರ್ ಮಾಡಿದ್ದು, ಇದರಿಂದ ವ್ಯಾಪಕ ವಿರೋಧವನ್ನು ಎದುರಿಸಿದ್ದಾರೆ. ಸಾಕಷ್ಟು ಫಾಲೋವರ್ಸ್ ಹೊಂದಿರುವ ವ್ಯಕ್ತಿಯೊಬ್ಬ ಈ ರೀತಿ ವಂಚನೆ ಮಾಡುವ ವಿಡಿಯೋಗಳನ್ನು ಶೇರ್ ಮಾಡೋದು ಎಷ್ಟು ಸರಿ ಅಂತಾ ಅನೇಕರು ಪ್ರಶ್ನೆ ಮಾಡಿದ್ದಾರೆ. ಏಕೆಂದರೆ ಈ ವಿಡಿಯೋದಲ್ಲಿ ಪನಾಯುಟೌ ಟಿಕೆಟ್ ಪಡೆದುಕೊಳ್ಳದೇ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ ಎನ್ನಲಾಗಿದೆ.
ಭಾರತದಲ್ಲಿ ಹೇಗೆ ಉಚಿತವಾಗಿ ಮೆಟ್ರೋದಲ್ಲಿ ಪ್ರಯಾಣಿಸಬಹುದು ಎಂಬುದನ್ನು ನಾನು ನಿಮಗೆ ಕಲಿಸುತ್ತೇನೆ ಅಂತಾ ವಿಡಿಯೋದಲ್ಲಿ ಪನಾಯುಟೌ ಹೇಳುತ್ತಾರೆ. ಟಿಕೆಟ್ ಸ್ಕ್ಯಾನಿಂಗ್ ಬಾರಿಕೇಡ್ಗಳನ್ನು ಜಂಪ್ ಮಾಡಿದ್ದಾರೆ. ಅಲ್ಲದೇ ಜನಸಂದಣಿ ಇರುವ ಮೆಟ್ರೋ ತೋರಿಸಿ ಇದೇ ಭಾರತೀಯ ಟ್ರೇನ್ಗಳು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಮಾತ್ರವಲ್ಲದೇ ಮೆಟ್ರೋದ ಒಳಗೆ ಕಸರತ್ತನ್ನು ಪ್ರದರ್ಶಿಸೋ ಮೂಲಕ ಸಾರ್ವಜನಿಕ ವಸ್ತುವಿಗೆ ಹಾನಿಯುಂಟು ಮಾಡೋ ಕಾರ್ಯ ಕೂಡ ಮಾಡಿರುವ ಆರೋಪ ಎದುರಾಗಿದೆ.
https://www.youtube.com/shorts/2ukGpzjsEw4?feature=share