
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ನಡೆದಿದ್ದು ಮರದ ನಡುವೆ ಸಿಲುಕಿದ್ದ ಹಸುವನ್ನು ರಕ್ಷಣೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಹಸುವು ಮರದ ಎರಡು ಕೊಂಬೆಗಳ ನಡುವೆ ಸಿಲುಕಿಕೊಂಡಿತ್ತು. ತಪ್ಪಿಸಿಕೊಳ್ಳಲು ಆಗದೇ ಹರಸಾಹಸ ಪಡುತ್ತಿದ್ದ ಹಸುವನ್ನು ರಕ್ಷಿಸಲಾಗಿದೆ. ಮರದ ಕೊಂಬೆಯನ್ನು ಕಡಿದು ಹಸುವನ್ನು ರಕ್ಷಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.