alex Certify ಬೆರಗುಗೊಳಿಸುತ್ತೆ ಕಲಾವಿದೆಯ ಕೈಚಳಕ; ಈ ಅದ್ಬುತ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 11 ಲಕ್ಷ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗುಗೊಳಿಸುತ್ತೆ ಕಲಾವಿದೆಯ ಕೈಚಳಕ; ಈ ಅದ್ಬುತ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 11 ಲಕ್ಷ ಜನ

ಸಾಮಾಜಿಕ ಜಾಲತಾಣಗಳು ಕಲಾವಿದರಿಗೆ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗಿಸುತ್ತಿದೆ. ಇದು ಕಲಾವಿದರಿಗೆ ಮಾತ್ರವಲ್ಲದೆ ಸುಂದರವಾದ ಕಲಾಕೃತಿಗಳನ್ನು ಹುಡುಕುತ್ತಿರುವವರಿಗೂ ಸಹ ನೆರವಾಗುತ್ತಿದೆ.

ಅಸೆಂಬ್ಲೇಜ್​ನಲ್ಲಿ ಕೆಲಸ ಮಾಡುವ ಮಹಿಳೆಯ ಅಂತಹ ವೀಡಿಯೊ ಒಂದನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಲಾಗಿದೆ.

“ಈ ಕಲಾಕೃತಿ ಎಷ್ಟು ಸುಂದರವಾಗಿದೆ” ಎಂಬ ಶೀರ್ಷಿಕೆ ಇರುವ ವಿಡಿಯೊದಲ್ಲಿ ಏಷ್ಯಾದ ಮಹಿಳೆಯೊಬ್ಬರು ಚೀನಾದ ಮಹಾಗೋಡೆಯ ಅಸೆಂಬ್ಲೇಜ್​ನಲ್ಲಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು.

30 ಸೆಕೆಂಡ್​ನ ವಿಡಿಯೊವು ಕಲಾಕೃತಿಯ ವಿವಿಧ ಭಾಗಗಳನ್ನು ತೋರಿಸುತ್ತದೆ. ಕೊನೆಯಲ್ಲಿ ಪ್ಯಾನ್​ ಔಟ್​ ಮತ್ತು ಸಂಪೂರ್ಣ ಕಲಾಕೃತಿಯನ್ನು ತೋರಿಸಲಾಗುತ್ತದೆ.

ಬಿಳಿ ಕ್ಯಾನ್ವಾಸ್​ನಲ್ಲಿ ಅಸೆಂಬ್ಲೇಜ್​ ಅನ್ನು ನಿರ್ಮಿಸಲು ಮಹಿಳೆ ಪ್ಲಾಸ್ಟರ್​ ಆಫ್​ ಪ್ಯಾರಿಸ್​ ಅನ್ನು ಬಳಸುತ್ತಾರೆ. ಯಾವುದೇ ಬಣ್ಣಗಳನ್ನು ಬಳಸದಿದ್ದರೂ, ಕಲಾಕೃತಿಯು ಅದ್ಭುತವಾಗಿ ಕಾಣುತ್ತದೆ.

ಈ ವಿಡಿಯೋ ಮೈಕ್ರೋ ಬ್ಲಾಗಿಂಗ್​ನಲ್ಲಿ 11 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. 27.8 ಕೆ ಲೈಕ್​ಗಳನ್ನು ಗಳಿಸಿದೆ. ಕಾಮೆಂಟ್​ ವಿಭಾಗದಲ್ಲಿ ನೆಟ್ಟಿಗರು ಕಲಾವಿದರ ಕೈಚಳಕವನ್ನು ಶ್ಲಾಘಿಸಿದ್ದಾರೆ.

https://twitter.com/Artsandcultr/status/1565627707563872256?ref_src=twsrc%5Etfw%7Ctwcamp%5Etweetembed%7Ctwterm%5E1565627707563872256%7Ctwgr%5Ea4cbb88c95f958751fcc8f03e1b0791c00bc4f2e%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-woman-working-on-a-great-wall-of-china-assemblage-stuns-the-twitter-5893873.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...