ಸಾಮಾಜಿಕ ಜಾಲತಾಣಗಳು ಕಲಾವಿದರಿಗೆ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗಿಸುತ್ತಿದೆ. ಇದು ಕಲಾವಿದರಿಗೆ ಮಾತ್ರವಲ್ಲದೆ ಸುಂದರವಾದ ಕಲಾಕೃತಿಗಳನ್ನು ಹುಡುಕುತ್ತಿರುವವರಿಗೂ ಸಹ ನೆರವಾಗುತ್ತಿದೆ.
ಅಸೆಂಬ್ಲೇಜ್ನಲ್ಲಿ ಕೆಲಸ ಮಾಡುವ ಮಹಿಳೆಯ ಅಂತಹ ವೀಡಿಯೊ ಒಂದನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದೆ.
“ಈ ಕಲಾಕೃತಿ ಎಷ್ಟು ಸುಂದರವಾಗಿದೆ” ಎಂಬ ಶೀರ್ಷಿಕೆ ಇರುವ ವಿಡಿಯೊದಲ್ಲಿ ಏಷ್ಯಾದ ಮಹಿಳೆಯೊಬ್ಬರು ಚೀನಾದ ಮಹಾಗೋಡೆಯ ಅಸೆಂಬ್ಲೇಜ್ನಲ್ಲಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು.
30 ಸೆಕೆಂಡ್ನ ವಿಡಿಯೊವು ಕಲಾಕೃತಿಯ ವಿವಿಧ ಭಾಗಗಳನ್ನು ತೋರಿಸುತ್ತದೆ. ಕೊನೆಯಲ್ಲಿ ಪ್ಯಾನ್ ಔಟ್ ಮತ್ತು ಸಂಪೂರ್ಣ ಕಲಾಕೃತಿಯನ್ನು ತೋರಿಸಲಾಗುತ್ತದೆ.
ಬಿಳಿ ಕ್ಯಾನ್ವಾಸ್ನಲ್ಲಿ ಅಸೆಂಬ್ಲೇಜ್ ಅನ್ನು ನಿರ್ಮಿಸಲು ಮಹಿಳೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಅನ್ನು ಬಳಸುತ್ತಾರೆ. ಯಾವುದೇ ಬಣ್ಣಗಳನ್ನು ಬಳಸದಿದ್ದರೂ, ಕಲಾಕೃತಿಯು ಅದ್ಭುತವಾಗಿ ಕಾಣುತ್ತದೆ.
ಈ ವಿಡಿಯೋ ಮೈಕ್ರೋ ಬ್ಲಾಗಿಂಗ್ನಲ್ಲಿ 11 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. 27.8 ಕೆ ಲೈಕ್ಗಳನ್ನು ಗಳಿಸಿದೆ. ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ಕಲಾವಿದರ ಕೈಚಳಕವನ್ನು ಶ್ಲಾಘಿಸಿದ್ದಾರೆ.
https://twitter.com/Artsandcultr/status/1565627707563872256?ref_src=twsrc%5Etfw%7Ctwcamp%5Etweetembed%7Ctwterm%5E1565627707563872256%7Ctwgr%5Ea4cbb88c95f958751fcc8f03e1b0791c00bc4f2e%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-woman-working-on-a-great-wall-of-china-assemblage-stuns-the-twitter-5893873.html