alex Certify ಫ್ಲೈ ಓವರ್​ ಕೆಳಗೆ ಬಡಮಕ್ಕಳಿಗೆ ಪಾಠ; ಯುವತಿ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಲೈ ಓವರ್​ ಕೆಳಗೆ ಬಡಮಕ್ಕಳಿಗೆ ಪಾಠ; ಯುವತಿ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರ

ನವದೆಹಲಿ: ಶಿಕ್ಷಣವು ಯಶಸ್ಸಿನ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ. ಒಬ್ಬ ವ್ಯಕ್ತಿಗೆ ಮೂಲಭೂತ ಶಿಕ್ಷಣದ ಕೊರತೆಯಾದರೆ ಅವರ ಭವಿಷ್ಯಕ್ಕೆ ಅದು ಮಾರಕವಾಗಬಹುದು. ಆದರೆ ಎಷ್ಟೋ ಮಕ್ಕಳು ಮೂಲ ಶಿಕ್ಷಣವೇ ದೊರೆಯದೇ ವಂಚಿತರಾಗುತ್ತಾರೆ. ಅಂಥ ಮಕ್ಕಳ ಪಾಲಿಗೆ ಅದೃಷ್ಟದೇವತೆಯಾಗಿ ಬಂದಿದ್ದಾರೆ ಈ ಶಿಕ್ಷಕಿ

ಫ್ಲೈಓವರ್ ಅಡಿಯಲ್ಲಿ ಮಕ್ಕಳಿಗೆ ಶಿಕ್ಷಕಿಯೊಬ್ಬರು ಪಾಠ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ದೆಹಲಿಯಲ್ಲಿ ಈ ದೃಶ್ಯ ಕಂಡುಬಂದಿದ್ದು, ವೈರಲ್​ ವಿಡಿಯೋಗೆ ಶ್ಲಾಘನೆಗಳ ಸುರಿಮಳೆಯೇ ಬರುತ್ತಿದೆ.

ವಾಹನ ದಟ್ಟಣೆಯ ನಡುವೆಯೂ ಯುವತಿ ಮಕ್ಕಳಿಗೆ ಕಲಿಸಲು ನಿರ್ಧರಿಸಿದ್ದರು. ಮಕ್ಕಳಿಗೆ ಶಿಕ್ಷಣದ ಮೇಲಿರುವ ಮಮತೆಯಿಂದಾಗಿ ಅವರ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಕಿ ಯಾವುದೇ ಫಲಾಪೇಕ್ಷೆಯಿಲ್ಲದೇ ಕಲಿಸುತ್ತಿದ್ದಾರೆ. ಬಿಳಿಯ ಬೋರ್ಡ್​ ಇಟ್ಟುಕೊಂಡು ಅಲ್ಲಿಯೇ ಪಾಠ ಕಲಿಸುತ್ತಿದ್ದಾರೆ. ಹಲವು ವರ್ಷಗಳಿಂದ ಈ ಶಿಕ್ಷಣ ನಡೆಯುತ್ತಿದ್ದರೂ ದಾರಿಹೋಕರೊಬ್ಬರು ವಿಡಿಯೋ ಮಾಡಿ ಹಾಕಿದ್ದರಿಂದ ಈ ವಿಡಿಯೋ ವೈರಲ್​ ಆಗಿದೆ. 15 ಸೆಕೆಂಡ್​ಗಳ ಈ ವಿಡಿಯೋ ಕಂಡು ಜನರು ಭಾವುಕರಾಗುತ್ತಿದ್ದಾರೆ. ಶಿಕ್ಷಕಿಯ ಮಹತ್ಕಾರ್ಯಕ್ಕೆ ಕೈಮುಗಿಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...