ನವದೆಹಲಿ: ಶಿಕ್ಷಣವು ಯಶಸ್ಸಿನ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ. ಒಬ್ಬ ವ್ಯಕ್ತಿಗೆ ಮೂಲಭೂತ ಶಿಕ್ಷಣದ ಕೊರತೆಯಾದರೆ ಅವರ ಭವಿಷ್ಯಕ್ಕೆ ಅದು ಮಾರಕವಾಗಬಹುದು. ಆದರೆ ಎಷ್ಟೋ ಮಕ್ಕಳು ಮೂಲ ಶಿಕ್ಷಣವೇ ದೊರೆಯದೇ ವಂಚಿತರಾಗುತ್ತಾರೆ. ಅಂಥ ಮಕ್ಕಳ ಪಾಲಿಗೆ ಅದೃಷ್ಟದೇವತೆಯಾಗಿ ಬಂದಿದ್ದಾರೆ ಈ ಶಿಕ್ಷಕಿ
ಫ್ಲೈಓವರ್ ಅಡಿಯಲ್ಲಿ ಮಕ್ಕಳಿಗೆ ಶಿಕ್ಷಕಿಯೊಬ್ಬರು ಪಾಠ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ದೆಹಲಿಯಲ್ಲಿ ಈ ದೃಶ್ಯ ಕಂಡುಬಂದಿದ್ದು, ವೈರಲ್ ವಿಡಿಯೋಗೆ ಶ್ಲಾಘನೆಗಳ ಸುರಿಮಳೆಯೇ ಬರುತ್ತಿದೆ.
ವಾಹನ ದಟ್ಟಣೆಯ ನಡುವೆಯೂ ಯುವತಿ ಮಕ್ಕಳಿಗೆ ಕಲಿಸಲು ನಿರ್ಧರಿಸಿದ್ದರು. ಮಕ್ಕಳಿಗೆ ಶಿಕ್ಷಣದ ಮೇಲಿರುವ ಮಮತೆಯಿಂದಾಗಿ ಅವರ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಕಿ ಯಾವುದೇ ಫಲಾಪೇಕ್ಷೆಯಿಲ್ಲದೇ ಕಲಿಸುತ್ತಿದ್ದಾರೆ. ಬಿಳಿಯ ಬೋರ್ಡ್ ಇಟ್ಟುಕೊಂಡು ಅಲ್ಲಿಯೇ ಪಾಠ ಕಲಿಸುತ್ತಿದ್ದಾರೆ. ಹಲವು ವರ್ಷಗಳಿಂದ ಈ ಶಿಕ್ಷಣ ನಡೆಯುತ್ತಿದ್ದರೂ ದಾರಿಹೋಕರೊಬ್ಬರು ವಿಡಿಯೋ ಮಾಡಿ ಹಾಕಿದ್ದರಿಂದ ಈ ವಿಡಿಯೋ ವೈರಲ್ ಆಗಿದೆ. 15 ಸೆಕೆಂಡ್ಗಳ ಈ ವಿಡಿಯೋ ಕಂಡು ಜನರು ಭಾವುಕರಾಗುತ್ತಿದ್ದಾರೆ. ಶಿಕ್ಷಕಿಯ ಮಹತ್ಕಾರ್ಯಕ್ಕೆ ಕೈಮುಗಿಯುತ್ತಿದ್ದಾರೆ.