alex Certify ಬೃಹತ್​ ಬಂಡೆ ಉರುಳಿ ಮನೆ ನಜ್ಜುಗುಜ್ಜು: ಕೂದಲೆಳೆ ಅಂತರದಿಂದ ಪಾರಾದ ಮನೆ ಮಾಲೀಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೃಹತ್​ ಬಂಡೆ ಉರುಳಿ ಮನೆ ನಜ್ಜುಗುಜ್ಜು: ಕೂದಲೆಳೆ ಅಂತರದಿಂದ ಪಾರಾದ ಮನೆ ಮಾಲೀಕ

ಪಲೋಲೊ: ರಾತ್ರಿ ಮಲಗಿರುವಾಗ ದೊಡ್ಡ ಬಂಡೆಯೊಂದು ಬಂದು ನೀವು ಮಲಗಿರುವ ಮಂಚಕ್ಕೆ ಅಪ್ಪಳಿಸಿದರೆ ಹೇಗಿರುತ್ತದೆ? ಊಹಿಸಿಕೊಳ್ಳಲೂ ಭಯವಾಗುತ್ತದೆ ಅಲ್ಲವೇ? ಆದರೆ ಅಂಥದ್ದೇ ಒಂದು ಘಟನೆ ಪಲೋಲೋ ಕಣಿವೆಯಲ್ಲಿ ನಡೆದಿದೆ.

ಇಲ್ಲಿ ಸಸಾಕಿ ಕುಟುಂಬಸ್ಥರು ವಾಸವಾಗಿರುವ ಮನೆಯೊಳಗೆ ಜನವರಿ 28 ರ ರಾತ್ರಿ ಬೃಹತ್ ಬಂಡೆಯೊಂದು ಅಪ್ಪಳಿಸಿದೆ. ಬಂಡೆ ಅಪ್ಪಳಿಸಿದ ವೇಗಕ್ಕೆ ಗೋಡೆ ಕುಸಿದು ಹೋಗಿದೆ. ಅಲ್ಲಿಯೇ ಮಂಚದ ಮೇಲೆ ಮಲಗಿದ್ದ ಕ್ಯಾರೋಲಿನ್ ಸಸಾಕಿ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ.

ಇದರ ಭಯಾನಕ ವಿಡಿಯೋ ವೈರಲ್​ ಆಗಿದೆ. ರಾತ್ರಿಯ ವೇಳೆ ಬಂಡೆ ಅಪ್ಪಳಿಸಿದ ರಭಸಕ್ಕೆ ಮನೆಯ ಸಿಂಡರ್ ಬ್ಲಾಕ್ ಗೋಡೆ ಮತ್ತು ಲಿವಿಂಗ್ ರೂಮ್ ಪುಡಿಯಾಗಿ ಮಲಗುವ ಕೋಣೆಯೊಳಕ್ಕೆ ನುಗ್ಗಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ. ಬಂಡೆ ಕ್ಯಾರೋಲಿನ್​ ಅವರ ಮಲಗಿದ್ದ ಮಂಚದ ಸಮೀಪ ಅಪ್ಪಳಿಸಿದೆ. ಶಬ್ದಕ್ಕೆ ಬೆದರಿ ಅವರು ಅಲ್ಲಿಂದ ಓಡಿ ಹೋದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

“ಅಬ್ಬರದ ಶಬ್ದ ಹೊರತುಪಡಿಸಿ ಏನಾಯಿತು ಎಂದು ನನಗೆ ನಿಜವಾಗಿಯೂ ತಿಳಿದಿರಲಿಲ್ಲ” ಎಂದು ಕ್ಯಾರೋಲಿನ್​ ಹೇಳಿದ್ದಾರೆ. ಬಂಡೆಯು ಸುಮಾರು 5 ಅಡಿ ಎತ್ತರ ಮತ್ತು ಅಗಲವಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಇದೇ ಮೊದಲ ಬಾರಿಗೆ ಈ ರೀತಿ ಘಟನೆ ಸಂಭವಿಸಿರುವುದು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...