alex Certify ಊರಿನ ಬೀದಿಗಳಲ್ಲಿ ಉಕ್ಕಿ ಹರಿದ ಲಾವಾರಸ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊರಿನ ಬೀದಿಗಳಲ್ಲಿ ಉಕ್ಕಿ ಹರಿದ ಲಾವಾರಸ….!

ಸ್ಪಾನಿಷ್ ಕೆನರಿ ದ್ವೀಪ ಲಾ ಪಾಮಾದಲ್ಲಿ ಭುಗಿಲೆದ್ದ ಜ್ವಾಲಾಮುಖಿಯಿಂದ ಕಾರುತ್ತಿರುವ ಲಾವಾರಸವು ವಸತಿ ಪ್ರದೇಶಗಳ ಬೀದಿಗಳಲ್ಲಿ ಹರಿಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಭಾನುವಾರ ಮಧ್ಯಾಹ್ನ 3 ಗಂಟೆಗೆ ಚಿಮ್ಮಿದ ಕುಂಬ್ರೇ ವಯೇಜಾ ಜ್ವಾಲಾಮುಖಿಯಿಂದ ಕಾರಿದ ಲಾವಾರಸ, ಗುಡ್ಡದಿಂದ ಇಳಿದು ಎಲ್ಲೆಡೆ ಹರಿದು ಸಾಗುತ್ತಿದ್ದರೆ ಮತ್ತೊಂದೆಡೆ ನಿವಾಸಿಗಳೆಲ್ಲಾ ತಂತಮ್ಮ ಮನೆಗಳಿಂದ ಓಡಿ ಹೋಗುತ್ತಿದ್ದಾರೆ.

ಗ್ರಾಮವೊಂದರ ಬೀದಿಗಳಲ್ಲಿ ಲಾವಾರಸ ಹರಿದಾಡುತ್ತಿದ್ದರೆ ಅಗ್ನಿಶಾಮಕ ಸಿಬ್ಬಂದಿ ಹಾನಿಯನ್ನು ನಿಯಂತ್ರಣಕ್ಕೆ ತರಲು ಭಾರೀ ಸಾಹಸ ಮಾಡುತ್ತಿದ್ದಾರೆ. ತನ್ನ ಹಾದಿಯಲ್ಲಿ ಬರುವ ಬಹುತೇಕ ಎಲ್ಲವನ್ನೂ ಹೊತ್ತಿಸಿ ಉರಿಸುತ್ತಿರುವ ಲಾವಾರಸದ ಕೆನ್ನಾಲಗೆಯ ಪರಿಯನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. 1971ರ ಬಳಿಕ ಇದೇ ಮೊದಲ ಬಾರಿಗೆ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಘಟನೆಯಿಂದ ಯಾರ ಜೀವಕ್ಕೂ ಹಾನಿಯಾಗಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...