alex Certify ಪ್ರಿಯತಮನಿಗಾಗಿ ನಡುರಸ್ತೆಯಲ್ಲೇ ಯುವತಿಯರಿಬ್ಬರ ನಡುವೆ ಸಖತ್ ಫೈಟ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯತಮನಿಗಾಗಿ ನಡುರಸ್ತೆಯಲ್ಲೇ ಯುವತಿಯರಿಬ್ಬರ ನಡುವೆ ಸಖತ್ ಫೈಟ್​..!

ಯುವಕನೊಬ್ಬನ ಮಾಜಿ ಗೆಳತಿ ಹಾಗೂ ಹಾಲಿ ಗೆಳತಿಯರು ನಡುರಸ್ತೆಯಲ್ಲಿ ರಂಪಾಟ ಮಾಡಿದ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಲಕ್ನೋದ ಬಾರಾಬಿರ್ವಾ ಸ್ಕ್ವೇರ್​ ಸಮೀಪದ ಬಾರ್​ ಒಂದರ ಎದುರು ನಡೆದಿದೆ.

ಯುವತಿಯರು ಬಾರ್​ ಎದುರು ಕೈ ಕೈ ಮಿಲಾಯಿಸಿದ್ದು ಇದರಲ್ಲಿ ಮಾಜಿ ಗೆಳತಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ಬಳಿಕ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬಳಿಕ ಯುವತಿ ದಾಖಲಿಸಿದ ದೂರನ್ನು ಆಧರಿಸಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.

ಸೋಮವಾರ ರಾತ್ರಿ, ಯುವತಿಯು ಬಾರ್​ ಎದುರು ತನ್ನ ಕಾರನ್ನು ನಿಲ್ಲಿಸಿದ್ದಾಳೆ. ಇದೇ ಸಮಯಕ್ಕೆ ಸರಿಯಾಗಿ ವ್ಯಕ್ತಿ ಕೂಡ ಬಾರ್​ನಿಂದ ಹೊರಬಂದಿದ್ದಾರೆ. ಈ ವೇಳೆ ಆತನ ಜೊತೆಯಲ್ಲಿ ಇಬ್ಬರು ಯುವತಿಯರಿದ್ದರು.

ರಾಬಿನ್​ ಜೊತೆಯಿದ್ದ ಇಬ್ಬರು ಯುವತಿಯರಿಗೆ ಕಾರಿನಲ್ಲಿದ್ದ ಯುವತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಇದಾದ ಬಳಿಕ ಯುವತಿಯರು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಕಾರಿನಲ್ಲಿದ್ದ ಯುವತಿಯು ರಾಬಿನ್​​ನ ಮಾಜಿ ಗೆಳತಿ ಎಂದು ತಿಳಿದುಬಂದಿದೆ.

ಕಾರಿನಲ್ಲಿದ್ದ ಯುವತಿಯು ಅಕ್ಟೋಬರ್​ 10ರಂದೇ ರಾಬಿನ್​ ವಿರುದ್ಧ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ದಾಖಲಿಸಿದ್ದಳು. ಹೀಗಾಗಿ ಪೊಲೀಸರು ರಾಬಿನ್​ಗಾಗಿ ಹುಡುಕಾಟ ನಡೆಸುತ್ತಲೇ ಇದ್ದರು. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಪೊಲೀಸರು ರಾಬಿನ್​ನ್ನು ಬಂಧಿಸಿದ್ದಾರೆ.

— Pawan Tiwari?? ?? (@pawan_pawant) October 26, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...