
ಭಾರೀ ಮಳೆಯಲ್ಲಿ ಕನಿಷ್ಟ 91 ಮಂದಿ ಸಾವನ್ನಪ್ಪಿದ್ದು, 25 ಲಕ್ಷ ಹೆಕ್ಟೇರ್ನಷ್ಟು ಕೃಷಿಭೂಮಿ ನಾಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರೀ ಮಳೆಗೆ ಈ ವರೆಗೆ ಕನಿಷ್ಟ 91 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 22 ಸಾವುಗಳು ಕಳೆದ ಕೆಲ ದಿನಗಳಲ್ಲಿ ಸಂಭವಿಸಿದೆ. ಇದು ಮಾತ್ರವಲ್ಲದೇ 4390.5 ಕಿಮೀ ಉದ್ದದ ರಸ್ತೆಗಳು ಹಾಗೂ 1077 ಸೇತುವೆಗಳು ನಾಶವಾಗಿದೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಲ್ಲಿ ನಾಂದೇಡ್ ಜಿಲ್ಲೆ ಅತೀ ಹೆಚ್ಚು ಹಾನಿ ಅನುಭವಿಸಿದೆ. 8,38,645 ಮಂದಿ ರೈತರಿಗೆ ಸೇರಿದ 5.77 ಲಕ್ಷ ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ.