alex Certify ತಲೆತಿರುಗಿಸುತ್ತೆ ಶಾಹಿದ್ ಕಪೂರ್ ದಂಪತಿ ಮಾಲ್ಡೀವ್ಸ್​ನಲ್ಲಿ ನೆಲೆಸಿದ್ದ ಬಂಗಲೆಯ 1 ದಿನದ ಬಾಡಿಗೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆತಿರುಗಿಸುತ್ತೆ ಶಾಹಿದ್ ಕಪೂರ್ ದಂಪತಿ ಮಾಲ್ಡೀವ್ಸ್​ನಲ್ಲಿ ನೆಲೆಸಿದ್ದ ಬಂಗಲೆಯ 1 ದಿನದ ಬಾಡಿಗೆ…..!

ಬಾಲಿವುಡ್​ ನಟ ಶಾಹಿದ್ ಕಪೂರ್​ ಪತ್ನಿ ಮೀರಾ ರಜಪೂತ್​ ಮಾಲ್ಡೀವ್ಸ್​​ನಲ್ಲಿ ಕೆಲ ಸಮಯದ ಹಿಂದಷ್ಟೇ ಸಖತ್​ ಎಂಜಾಯ್​ ಮಾಡಿದ್ದರು. ಪ್ರತಿ ರಾತ್ರಿ 2.89 ಲಕ್ಷ ರೂಪಾಯಿ ಬೆಲೆ ಹೊಂದಿರುವ ವಿಲ್ಲಾದಲ್ಲಿ ನೆಲೆಸಿದ್ದ ಮೀರಾ ರಜಪೂತ್​ ತಮ್ಮ ಐಷಾರಾಮಿ ಬಂಗಲೆಯ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

ಇಂದು ಬಿಡುಗಡೆಯಾದ ಗ್ರಾಜಿಯಾ 125 ರೆಪ್ಸೋಲ್ ಹೋಂಡಾ ಟೀಮ್ ಆಡಿಷನ್ ಬೆಲೆ ಎಷ್ಟು ಗೊತ್ತಾ…?

ಮಕ್ಕಳಾದ ಮೀಶಾ ಹಾಗೂ ಝೈನ್​ ಜೊತೆಯಲ್ಲಿ ಮಾಲ್ಡೀವ್ಸ್​ಗೆ ತೆರಳಿದ್ದ ಶಾಹಿದ್ ಕಪೂರ್​ ಹಾಗೂ ಮೀರಾ ದಂಪತಿ ಐಷಾರಾಮಿ ಸೋನೆವಾ ಫುಶಿ ರೆಸಾರ್ಟ್​ನಲ್ಲಿ ನೆಲೆಸಿದ್ದರು.

ಕಳೆದ ತಿಂಗಳು ಮಾಲ್ಡೀವ್ಸ್​ಗೆ ತೆರಳಿದ್ದ ನಾನು ಬೆಕ್ಕಿನ ನಿದ್ದೆ ಮಾಡಲು ಆಯ್ಕೆ ಮಾಡಿಕೊಳ್ತಿದ್ದ ನನ್ನಿಷ್ಟದ ಸ್ಥಳಗಳು ಇಲ್ಲಿವೆ ನೋಡಿ. ನಾನು ಇದರಲ್ಲಿ ಬಹಳ ನಿಪುಣನಿದ್ದೇನೆ. ಬರಿಗಾಲಿನ ನಡಿಗೆ ಹಾಗೂ ಆ ಬೆಚ್ಚನೆಯ ದಿನಗಳಿಗೆ ಮತ್ತೊಮ್ಮೆ ಮರಳುವ ಬಗ್ಗೆ ಹಗಲು ಕನಸು ಕಾಣುತ್ತಿದ್ದೇನೆ ಎಂದು ತಮ್ಮ ಪೋಸ್ಟ್​ಗೆ ಮೀರಾ ರಜಪೂತ್​ ಕಪೂರ್​ ಶೀರ್ಷಿಕೆ ನೀಡಿದ್ದಾರೆ.

ಶಾಹಿದ್ ಕಪೂರ್​ ಕುಟುಂಬದಲ್ಲಿ ಮಾಲ್ಡೀವ್ಸ್​ನಲ್ಲಿ ನೆಲೆಸಿದ್ದ ಈ ಐಷಾರಾಮಿ ಬಂಗಲೆಯು ಪ್ರತಿ ರಾತ್ರಿಗೆ 2.89 ಲಕ್ಷ ರೂಪಾಯಿ ಬಾಡಿಗೆ ಹೊಂದಿದೆ. ಈ ಐಷಾರಾಮಿ ವಿಲ್ಲಾದಲ್ಲಿ ಕಪೂರ್​ ದಂಪತಿ 2 ದಿನ ನೆಲೆಸಿದ್ದರು. ಮಾಲ್ಡೀವ್ಸ್​ಗೆ ತೆರಳಿದ್ದ ಶಾಹೀದ್​ ದಂಪತಿ ಇನ್​ಸ್ಟಾಗ್ರಾಂ ಪೋಸ್ಟ್​ ಮೂಲಕ ತಮ್ಮ ವೆಕೆಷನ್​ ಮೋಜು ಮಸ್ತಿಗಳನ್ನು ಅಭಿಮಾನಿಗಳಿಗೆ ಶೇರ್​ ಮಾಡುತ್ತಲೇ ಇದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...