ಬಾಲಿವುಡ್ ನಟ ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಮಾಲ್ಡೀವ್ಸ್ನಲ್ಲಿ ಕೆಲ ಸಮಯದ ಹಿಂದಷ್ಟೇ ಸಖತ್ ಎಂಜಾಯ್ ಮಾಡಿದ್ದರು. ಪ್ರತಿ ರಾತ್ರಿ 2.89 ಲಕ್ಷ ರೂಪಾಯಿ ಬೆಲೆ ಹೊಂದಿರುವ ವಿಲ್ಲಾದಲ್ಲಿ ನೆಲೆಸಿದ್ದ ಮೀರಾ ರಜಪೂತ್ ತಮ್ಮ ಐಷಾರಾಮಿ ಬಂಗಲೆಯ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಇಂದು ಬಿಡುಗಡೆಯಾದ ಗ್ರಾಜಿಯಾ 125 ರೆಪ್ಸೋಲ್ ಹೋಂಡಾ ಟೀಮ್ ಆಡಿಷನ್ ಬೆಲೆ ಎಷ್ಟು ಗೊತ್ತಾ…?
ಮಕ್ಕಳಾದ ಮೀಶಾ ಹಾಗೂ ಝೈನ್ ಜೊತೆಯಲ್ಲಿ ಮಾಲ್ಡೀವ್ಸ್ಗೆ ತೆರಳಿದ್ದ ಶಾಹಿದ್ ಕಪೂರ್ ಹಾಗೂ ಮೀರಾ ದಂಪತಿ ಐಷಾರಾಮಿ ಸೋನೆವಾ ಫುಶಿ ರೆಸಾರ್ಟ್ನಲ್ಲಿ ನೆಲೆಸಿದ್ದರು.
ಕಳೆದ ತಿಂಗಳು ಮಾಲ್ಡೀವ್ಸ್ಗೆ ತೆರಳಿದ್ದ ನಾನು ಬೆಕ್ಕಿನ ನಿದ್ದೆ ಮಾಡಲು ಆಯ್ಕೆ ಮಾಡಿಕೊಳ್ತಿದ್ದ ನನ್ನಿಷ್ಟದ ಸ್ಥಳಗಳು ಇಲ್ಲಿವೆ ನೋಡಿ. ನಾನು ಇದರಲ್ಲಿ ಬಹಳ ನಿಪುಣನಿದ್ದೇನೆ. ಬರಿಗಾಲಿನ ನಡಿಗೆ ಹಾಗೂ ಆ ಬೆಚ್ಚನೆಯ ದಿನಗಳಿಗೆ ಮತ್ತೊಮ್ಮೆ ಮರಳುವ ಬಗ್ಗೆ ಹಗಲು ಕನಸು ಕಾಣುತ್ತಿದ್ದೇನೆ ಎಂದು ತಮ್ಮ ಪೋಸ್ಟ್ಗೆ ಮೀರಾ ರಜಪೂತ್ ಕಪೂರ್ ಶೀರ್ಷಿಕೆ ನೀಡಿದ್ದಾರೆ.
ಶಾಹಿದ್ ಕಪೂರ್ ಕುಟುಂಬದಲ್ಲಿ ಮಾಲ್ಡೀವ್ಸ್ನಲ್ಲಿ ನೆಲೆಸಿದ್ದ ಈ ಐಷಾರಾಮಿ ಬಂಗಲೆಯು ಪ್ರತಿ ರಾತ್ರಿಗೆ 2.89 ಲಕ್ಷ ರೂಪಾಯಿ ಬಾಡಿಗೆ ಹೊಂದಿದೆ. ಈ ಐಷಾರಾಮಿ ವಿಲ್ಲಾದಲ್ಲಿ ಕಪೂರ್ ದಂಪತಿ 2 ದಿನ ನೆಲೆಸಿದ್ದರು. ಮಾಲ್ಡೀವ್ಸ್ಗೆ ತೆರಳಿದ್ದ ಶಾಹೀದ್ ದಂಪತಿ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ತಮ್ಮ ವೆಕೆಷನ್ ಮೋಜು ಮಸ್ತಿಗಳನ್ನು ಅಭಿಮಾನಿಗಳಿಗೆ ಶೇರ್ ಮಾಡುತ್ತಲೇ ಇದ್ದರು.