ತಾಯಿ ಮತ್ತು ಮಗಳ ಪೈಲೆಟ್ ಜೋಡಿ ಒಂದೇ ವಿಮಾನದ ಜವಾಬ್ದಾರಿ ನಿರ್ವಹಿಸಿ ಇತಿಹಾಸ ನಿರ್ಮಿಸಿದೆ.
ಕ್ಯಾಪ್ಟನ್ ಹಾಲಿ ಪೆಟಿಟ್ ಮತ್ತು ಫಸ್ಟ್ ಆಫೀಸರ್ ಕೀಲಿ ಪೆಟಿಟ್ ಜುಲೈ 23 ರಂದು ಅಮೆರಿಕಾದ ಡೆನ್ವರ್ನಿಂದ ಸೇಂಟ್ ಲೂಯಿಸ್ಗೆ ವಿಮಾನ ಚಲಾಯಿಸಿದ್ದು, ಇದು ಅಮೆರಿಕಾ ಏರ್ಲೈನ್ಸ್ ಇತಿಹಾಸದಲ್ಲಿ ಮೊದಲ ತಾಯಿ- ಮಗಳು ಪೈಲೆಟ್ ಜೋಡಿ ಮುನ್ನೆಡೆಸಿದ್ದು ದಾಖಲೆಯಾಯಿತು.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಹಾಲಿ ಪೆಟಿಟ್ ವಿಮಾನದಲ್ಲಿ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ಎಲ್ಲರಿಗೂ ಧನ್ಯವಾದಗಳು. ಇದು ನಮಗೆ ಮತ್ತು ಸೌತ್ ವೆಸ್ಟ್ ಏರ್ಲೈನ್ಸ್ಗೆ ಬಹಳ ರೋಮಾಂಚನಾಕಾರಿ ದಿನವಾಗಿದೆ, ಸೌತ್ ವೆಸ್ಟ್ ಏರ್ಲೆನ್ಸ್ನ ಡೆಕ್ನಲ್ಲಿ ನಾವು ಮೊದಲ ತಾಯಿ – ಮಗಳು ಜೋಡಿಯಾಗಿದ್ದೇವೆ. ಆದ್ದರಿಂದ ಇಲ್ಲಿಗೆ ಬಂದಿದ್ದಕ್ಕಾಗಿ ಧನ್ಯವಾದಗಳು ಎಂದು ಅವರು ಹೇಳುವುದನ್ನು ಕೇಳಬಹುದು.
ಆರಂಭದಲ್ಲಿ ಕಾಲೇಜು ಮುಗಿಸಿ ಪೈಲೆಟ್ ಅಟೆಂಡೆಂಟ್ ಆಗಿ ಕೆಲಸ ಆರಂಭಿಸಿದ ಹಾಲಿ, ನಂತರ ಡ್ರೈವಿಂಗ್ ಸೀಟ್ ನಲ್ಲಿ ಕೂರಲು ನಿರ್ಧರಿಸಿದ್ದರು. ಬಳಿಕ ಫ್ಲೈಯಿಂಗ್ ತರಗತಿಗಳನ್ನು ತೆಗೆದುಕೊಂಡಳು. ತನ್ನ ತಾಯಿಯಂತೆ, ಕೆಲ್ಲಿ ಕೂಡ ತನ್ನ 14ನೇ ವಯಸ್ಸಿನಲ್ಲಿ ಪೈಲಟ್ ಆಗಬೇಕೆಂದು ಕನಸು ಕಂಡು, ನಂತರ ತರಬೇತಿ ಪಡೆದು ಪರವಾನಗಿಯನ್ನು ಪಡೆದುಕೊಂಡಿದ್ದಾರೆ. 2017ರಲ್ಲಿ ಇಂಟರ್ನ್ ಆಗಿ ಏರ್ಲೈನ್ಗೆ ಸೇರಿದಳು.
ಭಾರತದಲ್ಲಿ ಇದೇ ರೀತಿಯ ಘಟನೆಯಲ್ಲಿ ತಾಯಿ -ಮಗ ಪೈಲಟ್ ಜೋಡಿಯು ತಾಯಂದಿರ ದಿನದ ಸಂದರ್ಭದಲ್ಲಿ ಒಟ್ಟಿಗೆ ಹಾರಾಟ ನಡೆಸಿದ್ದರು.