alex Certify ನಾಟೌಟ್ ನೀಡಿದ್ರೂ ಪೆವಿಲಿಯನ್ ಕಡೆ ಸಾಗಿ ಕ್ರೀಡಾ ಸ್ಪೂರ್ತಿ ಮೆರೆದ ಭಾರತೀಯ ಆಟಗಾರ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಟೌಟ್ ನೀಡಿದ್ರೂ ಪೆವಿಲಿಯನ್ ಕಡೆ ಸಾಗಿ ಕ್ರೀಡಾ ಸ್ಪೂರ್ತಿ ಮೆರೆದ ಭಾರತೀಯ ಆಟಗಾರ್ತಿ

India vs Australia: Watch Punam Raut walks off against Australia despite given not out, experts dividedಗೋಲ್ಡ್‌ ಕೋಸ್ಟ್‌: ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್‌ ಸ್ಮೃತಿ ಮಂದನಾ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದರೆ, ಮತ್ತೊಬ್ಬ ಆಟಗಾರ್ತಿ ಪೂನಮ್ ರೌತ್ ‘ಸ್ಪಿರಿಟ್ ಆಫ್ ಕ್ರಿಕೆಟ್’ ಎತ್ತಿಹಿಡಿದು ಹೃದಯ ಗೆದ್ದಿದ್ದಾರೆ.

ಶುಕ್ರವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್‌ನ 2ನೇ ದಿನ, ಪೂನಮ್ ರೌತ್ 36 ರನ್ ಗಳಿಸಿದ್ದಾಗ ಔಟ್ ಎಂದು ಹೊರನಡೆದಿದ್ದಾರೆ. ಆದರೆ, ಪೂನಮ್ ಔಟಾಗಿಲ್ಲ ಎಂದು ಅಂಪೈರ್ ತೀರ್ಪು ನೀಡಿದ್ರೂ ಭಾರತೀಯ ಬ್ಯಾಟರ್ ಪೆವಿಲಿಯನ್ ಹಾದಿ ಹಿಡಿದಿದ್ದಾರೆ.

ಖ್ಯಾತ ನಟ ಶಿವಾಜಿ ಗಣೇಶನ್​​ಗೆ ಗೂಗಲ್​ ಡೂಡಲ್​ ಗೌರವ

ಕ್ರಿಕೆಟ್ ಆಸ್ಟ್ರೇಲಿಯಾದ ಟ್ವಿಟ್ಟರ್ ಹ್ಯಾಂಡಲ್ ಈ ಘಟನೆಯ ವಿಡಿಯೋವನ್ನು ಹಂಚಿಕೊಂಡಿದೆ. ಇತ್ತ ಪೂನಮ್ ರೌತ್ ಅವರು ಅಸಾಧಾರಣ ನಿರ್ಧಾರದಿಂದ ನಿರ್ಗಮಿಸಿ ವ್ಯಾಪಕ ಪ್ರಶಂಸೆ ಪಡೆದರೆ, ಸ್ಮೃತಿ ಮಂದನಾ ಅವರು ಪಂದ್ಯದ ಸ್ಟಾರ್ ಆಗಿದ್ದಾರೆ.

ಸ್ಟೈಲಿಶ್ ಓಪನರ್ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಭಾರತೀಯ ಮಹಿಳೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಮೈದಾನದ ಮೂಲೆ-ಮೂಲೆಗೆ ಬೌಂಡರಿಗಳನ್ನು ಬಾರಿಸುವ ಮುಖಾಂತರ ಆಸೀಸ್ ಕ್ರಿಕೆಟ್ ಆಟಗಾರ್ತಿಯರ ಬೆವರಿಳಿಸಿದ್ದಾರೆ. ಮಂದನಾ ಅಂತಿಮವಾಗಿ 127 ರನ್ ಗಳಿಸಿ ಆಶ್ಲೇ ಗಾರ್ಡ್ನರ್ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...