alex Certify ಏನೂ ಕಷ್ಟಪಡದೇ ಯಶಸ್ಸು ಸಿಗುತ್ತೆ ಅನ್ನೋದಕ್ಕೆ ಇದೇನಾ ಉದಾಹರಣೆ ? ಇಂಟ್ರಸ್ಟಿಂಗ್‌ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏನೂ ಕಷ್ಟಪಡದೇ ಯಶಸ್ಸು ಸಿಗುತ್ತೆ ಅನ್ನೋದಕ್ಕೆ ಇದೇನಾ ಉದಾಹರಣೆ ? ಇಂಟ್ರಸ್ಟಿಂಗ್‌ ವಿಡಿಯೋ ವೈರಲ್

ಕೆಲವರು ಎಷ್ಟೇ ಕಷ್ಟಪಟ್ಟರೂ ಅವರಿಗೆ ಏನೂ ಸಿಗುವುದಿಲ್ಲ, ಇನ್ನು ಕೆಲವರಿಗೆ ಕೆಲಸ ಮಾಡದಿದ್ದರೂ ಸಲೀಸಾಗಿ ಜಯ ಕಾಲ ಬುಡಕ್ಕೇ ಬಂದು ಬೀಳುತ್ತದೆ. ಅದನ್ನೇ ಸೂಚಿಸುವ ಕ್ರಿಕೆಟ್ ಪಂದ್ಯಾವಳಿಯ ವಿಡಿಯೋ ಒಂದು ವೈರಲ್​ ಆಗಿದೆ.

ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ, ಬ್ಯಾಟರ್ ಚೆಂಡನ್ನು ಬೌಂಡರಿಗೆ ಹೊಡೆದಾಗ ಅದನ್ನು ಕ್ಯಾಚ್​ ಮಾಡಲು ಸರ್ಕಸ್​ ಮಾಡಿದ ಫೀಲ್ಡರ್​ ಕೈಗೆ ಬಾಲ್​ ಸಿಗುವುದಿಲ್ಲ. ಆದರೆ ಮುಂದೆ ಆದದ್ದು ಮಾತ್ರ ಕುತೂಹಲವಾಗಿದೆ.

ಆಗಿದ್ದೇನೆಂದರೆ, ಬ್ಯಾಟರ್​ ಚೆಂಡನ್ನು ಹೊಡೆದಾಗ ಅದನ್ನು ಹಿಡಿಯಲು ಇಬ್ಬರು ಆಟಗಾರರು ಶ್ರಮವಹಿಸಿ ಓಡೋಡಿ ಹೋಗುತ್ತಾರೆ. ಅದನ್ನು ಹಿಡಿಯುವ ಪ್ರಯತ್ನ ಕೂಡ ಮಾಡುತ್ತಾರೆ. ಆದರೆ ಅದು ಕೈತಪ್ಪಿ ಹೋಗುತ್ತದೆ. ಆಗ ಅಲ್ಲಿಯೇ ನಿಂತಿದ್ದ ಇನ್ನೊಬ್ಬ ಆಟಗಾರ ಕಿಂಚಿತ್​ ಕದಲುವುದೇ ಇಲ್ಲ. ನಿಂತಲ್ಲಿಯೇ ಬಂದು ಚೆಂಡು ಆತನ ಕೈಗೆ ಬಂದು ಬೀಳುತ್ತದೆ. ಅದನ್ನು ಆತ ಕ್ಯಾಚ್​ ಹಿಡಿಯುತ್ತಾನೆ.

ಎಷ್ಟೋ ಮಂದಿಯ ಜೀವನ ಕೂಡ ಹೀಗೆಯೇ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಏನೂ ಕಷ್ಟಪಡದೇ ಯಶಸ್ಸು ಸಿಗೋದು ಎಂದರೆ ಇದೇ ಎಂದು ಹಲವರು ಹೇಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...