alex Certify Watch Video | ಭಾರೀ ಸುಂಟರಗಾಳಿಗೆ ಬೆಚ್ಚಿಬಿದ್ದ ಜನ; 50 ಮನೆಗೆ ಹಾನಿ, 10 ಜನರಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಭಾರೀ ಸುಂಟರಗಾಳಿಗೆ ಬೆಚ್ಚಿಬಿದ್ದ ಜನ; 50 ಮನೆಗೆ ಹಾನಿ, 10 ಜನರಿಗೆ ಗಾಯ

ಪಂಜಾಬ್‌ನ ಫಜಿಲ್ಕಾ ಜಿಲ್ಲೆಯ ಬುಕೈನ್‌ವಾಲಾ ಗ್ರಾಮದಲ್ಲಿ ಭಾರೀ ಸುಂಟರಗಾಳಿಗೆ ಸುಮಾರು 50 ಮನೆಗಳಿಗೆ ಹಾನಿಯಾಗಿದೆ. ಇದಲ್ಲದೆ 3 ಚದರ ಕಿಲೋಮೀಟರ್ ಪ್ರದೇಶದಲ್ಲಿ 10 ಜನರು ಗಾಯಗೊಂಡಿದ್ದಾರೆ.

ಗಾಯಗೊಂಡ ಇಬ್ಬರನ್ನು ಫರೀದ್‌ಕೋಟ್ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದ್ದು. ಇತರರನ್ನು ಅಬೋಹರ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸುಂಟರಗಾಳಿಯು ಶುಕ್ರವಾರ ಸಂಜೆ 4 ಗಂಟೆಗೆ ಆಕಾಶದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿತು ಮತ್ತು ಸ್ಥಳೀಯ ಪ್ರದೇಶಕ್ಕೆ ವ್ಯಾಪಕ ಹಾನಿಯನ್ನುಂಟು ಮಾಡಿತು ಎಂದು ನಿವಾಸಿಗಳು ತಿಳಿಸಿದ್ದಾರೆ.

ಭಾರೀ ಸುಂಟರಗಾಳಿಯಿಂದ ಗ್ರಾಮದಲ್ಲಿ ವ್ಯಾಪಕ ಹಾನಿಯಾಗಿದೆ ಮತ್ತು ಸುಮಾರು 10 ಜನರು ಗಾಯಗೊಂಡಿದ್ದಾರೆ ಎಂದು ಫಾಜಿಲ್ಕಾ ಉಪ ಆಯುಕ್ತ ಸೇನು ದುಗ್ಗಲ್ ತಿಳಿಸಿದ್ದಾರೆ.

ಈ ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದು, ಸುಂಟರಗಾಳಿಯು ಹಲವಾರು ಪಟ್ಟಣಗಳ ಮೂಲಕ ಹಾದುಹೋಗಿದ್ದು ತೀವ್ರ ಗಾಳಿಯನ್ನು ತೋರಿಸುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...