alex Certify ಪಾರದರ್ಶಕ ಈಜುಕೊಳದ ವಿಡಿಯೋ‌ ಫುಲ್ ವೈರಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರದರ್ಶಕ ಈಜುಕೊಳದ ವಿಡಿಯೋ‌ ಫುಲ್ ವೈರಲ್…!

ವಿಶ್ವದ ಮೊದಲ ತೇಲುವ ಹಾಗೂ ಪಾರದರ್ಶಕ ಈಜುಕೊಳ ಕೆಲದಿನಗಳ ಹಿಂದಷ್ಟೇ ಲಂಡನ್​​ನಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಸ್ಕೈ ಪೂಲಿಸ್​ ಹೆಸರಿನ ಈ ಪಾರದರ್ಶಕ ಈಜುಕೋಳ 82 ಅಡಿ ಉದ್ದವಿದೆ.

ನೈಋತ್ಯ ಲಂಡನ್​ನ ರಾಯಭಾರ ಕಚೇರಿಯಲ್ಲಿ ಎರಡು ಅಪಾರ್ಟ್​ಮೆಂಟ್​ಗಳ 10ನೆ ಮಹಡಿಯ ಮಧ್ಯದಲ್ಲಿ ಈ ತೇಲುವ ಈಜುಕೊಳವನ್ನ ನಿರ್ಮಿಸಲಾಗಿದೆ. ಈ ಈಜುಕೊಳವು ಭೂಮಿಯಿಂದ 115 ಅಡಿ ಎತ್ತರದಲ್ಲಿದೆ. ಈ ಈಜುಕೊಳದಲ್ಲಿ 50 ಟನ್​ ನೀರನ್ನ ತುಂಬಿಸಲಾಗಿದೆ. ಅಲ್ಲದೇ ಮೇಲ್ಛಾವಣಿ ಬಾರ್​ ಹಾಗೂ ಸ್ಪಾ ವ್ಯವಸ್ಥೆ ಕೂಡ ಮಾಡಲಾಗಿದೆ.

ಈ ವಿಶೇಷವಾದ ಈಜುಕೊಳವನ್ನ ಎಕಸ್ರ್ಲೆಓ ಕಲ್ಲಗಾನ್ ಎಂಬ ಇಂಜಿನಿಯರ್​ ನಿರ್ಮಿಸಿದ್ದಾರೆ. 2 ಬೆಡ್​ ರೂಮ್​ ಮನೆಗಳನ್ನ ಹೊಂದಿರುವ ಎರಡು ಗಗನಚುಂಬಿ ಕಟ್ಟಡಗಳ ನಡುವೆ ಈ ಈಜುಕೊಳವನ್ನ ನಿರ್ಮಿಸಲಾಗಿದೆ. ಕಟ್ಟಡದ ನಿವಾಸಿಗಳಿಗೆ ಮಾತ್ರ ಈ ಈಜುಕೊಳವನ್ನ ಬಳಕೆ ಮಾಡಲು ಅನುಮತಿ ನೀಡಲಾಗಿದೆ.

ಈಜುಕೊಳದ ವಿಡಿಯೋವನ್ನ ರಾಯಭಾರ ಕಚೇರಿ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ. ಈ ಈಜುಕೊಳವು ಮೇ 19ರಂದು ಲೋಕಾರ್ಪಣೆಗೊಂಡಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...