ಕಾಡಿನಲ್ಲಿ ಸಫಾರಿ ಹೋಗುವುದು ಒಂಥರಾ ಖುಷಿ ಕೊಡುವ ವಿಚಾರ ಹೌದಾದರೂ ಒಮ್ಮೊಮ್ಮೆ ಇದೇ ಸಫಾರಿ ಸಂದರ್ಭದಲ್ಲಿ ವನ್ಯಜೀವಿಗಳು ಸಿಟ್ಟುಗೊಂಡು ಅಟ್ಟಿಸಿಕೊಂಡು ಬಂದರೆ ಅದು ಭಾರೀ ಅಪಾಯಕಾರಿಯೂ ಹೌದು.
ಇಂಥದ್ದೇ ಒಂದು ಅನುಭವ ಎದುರಿಸಿದ ಕನ್ನಡಿಗ ಪ್ರವಾಸಿಗರ ಗುಂಪೊಂದು, ಆನೆಯ ಸಿಟ್ಟಿನ ಪರಿಣಾಮ ಏನು ಎಂದು ಕಂಡು ಬಂದ ವಿಡಿಯೋವೊಂದು ವೈರಲ್ ಆಗಿದೆ. ಆನೆಯನ್ನು ಕಾಣುತ್ತಲೇ ಭಾರೀ ಉಲ್ಲಾಸದಿಂದ ಪ್ರವಾಸಿಗರು ಚೀರಿದ ಪರಿಣಾಮ ಕುತೂಹಲಗೊಂಡ ಆನೆಯೊಂದು ಅವರತ್ತ ಹೆಜ್ಜೆ ಹಾಕಿದೆ.
ವಾಹನವನ್ನು ಕಂಡೊಡನೆಯೇ ಅದರತ್ತ ದಾಪುಗಾಲಿಟ್ಟು ಆನೆ ಯಾವುದೇ ಆಕ್ರಮಣಾಕಾರಿ ಧೋರಣೆ ತೋರಲಿಲ್ಲವಾದರೂ, ದೈತ್ಯ ಜೀವಿ ತಮ್ಮತ್ತಲೇ ಬರುತ್ತಿದ್ದದ್ದನ್ನು ಕಂಡ ಪ್ರಯಾಣಿಕರು ಭಯಗೊಂಡು, “ಕೃಷ್ಣಾ ವಾಸುದೇವಾ,” ಎಂದು ಭಜನೆ ಮಾಡಲು ಆರಂಭಿಸಿದ್ದಾರೆ.
ಪ್ರಯಾಣಿಕರಿಗೆ ಸರಿಯಾಗೇ ಚೋಕ್ ಕೊಟ್ಟ ಆನೆ, ನೋಡ ನೋಡುತ್ತಲೇ ರಸ್ತೆಯ ಬದಿಗೆ ಸರಿದು ಆ ವಾಹನ ಮುಂದಕ್ಕೆ ಹೋಗಲು ಬಿಟ್ಟಿತು. ಅಲ್ಲದೇ ತನ್ನ ಸೊಂಡಿಲಿನಿಂದ ’ಸರಿ! ನೀವಿನ್ನು ಹೊರಡಬಹುದು!’ ಎಂದು ಸನ್ನೆ ಮಾಡಿದಂತೆಯೂ ಕಂಡಿತು.
ಚಾಲಕ ವಾಹನವನ್ನು ರಿವರ್ಸ್ ಪಡೆಯಲು ಆರಂಭಿಸಿದರೂ ಆನೆ ಅಲ್ಲಿಗೇ ನಿಲ್ಲದೇ, ಕಾರಿಗೆ ಇನ್ನಷ್ಟು ಹತ್ತಿರವಾಗುತ್ತಲೇ ಇತ್ತು. ಇಂಥ ಭೀತಿಯ ವಾತಾವರಣದಲ್ಲಿ ವಾಹನದೊಳಗಿದ್ದ ಪ್ರಯಾಣಿಕರು ದೈವನಾಮ ಸ್ಮರಣೆ ಮಾಡಲು ಮುಂದಾಗಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.